ETV Bharat / bharat

ಬಜೆಟ್ 2021-22: ಆರೋಗ್ಯ, ಡಿಜಿಟಲ್ ಇಂಡಿಯಾ, ಮೂಲಸೌಕರ್ಯ, ಉದ್ಯೋಗಗಳತ್ತ ವಿತ್ತ ಸಚಿವೆಯ ಚಿತ್ತ - ಭಾರತೀಯ ಕೈಗಾರಿಕಾ ಒಕ್ಕೂಟ

ಮುಂಬರುವ ಬಜೆಟ್​ನಲ್ಲಿ ಆರೋಗ್ಯ, ಡಿಜಿಟಲೀಕರಣ, ಮೂಲಸೌಕರ್ಯಗಳು ಹಾಗೂ ಕೋವಿಡ್​ ನಂತರದ ಯುಗದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಗಮನಹರಿಸುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Dec 19, 2020, 2:29 PM IST

ನವದೆಹಲಿ: ಕೊರೊನಾ ಕರಿಛಾಯೆಯಿಂದ ಭಾರತ ತಪ್ಪಿಸಿಕೊಳ್ಳುತ್ತಿರುವ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲು ರೂಪುರೇಷೆಗಳನ್ನು ರಚಿಸಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ (CII) ಆಯೋಜಿಸಿದ್ದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್, ಮುಂಬರುವ ಬಜೆಟ್​ನಲ್ಲಿ ಆರೋಗ್ಯ, ಡಿಜಿಟಲೀಕರಣ, ಮೂಲಸೌಕರ್ಯಗಳು ಹಾಗೂ ಕೋವಿಡ್​ ನಂತರದ ಯುಗದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಗಮನಹರಿಸುತ್ತೇವೆ ಎಂದು ಹೇಳಿದ್ದಾರೆ.

ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಆರೋಗ್ಯ ಮತ್ತು ಆರೋಗ್ಯಕ್ಕಾಗಿ ಮಾಡುವ ಹೂಡಿಕೆ ನಮ್ಮ ಜೀವನವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಹಕರಿಸುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾಗಿಲ್ಲ. ಇದಕ್ಕಾಗಿ ಕೆಲವು ರೀತಿಯ ನಿಬಂಧನೆಗಳನ್ನು ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ಓದಿ: ಯುಎಸ್​ನಲ್ಲಿ 2ನೇ ಕೋವಿಡ್ ಲಸಿಕೆಗೆ ಅನುಮೋದನೆ: ಸೋಮವಾರ ಲಸಿಕೆ ಪಡೆಯಲಿರುವ ಬೈಡನ್

ಕೊರೊನಾಗೆ ಲಸಿಕೆ ವಿತರಿಸುವ ಕಾರ್ಯಕ್ರಮಗಳ ಹೊರತಾಗಿ ವಿಶ್ವದ ದೇಶಗಳು ಸಾಂಕ್ರಾಮಿಕ ನಂತರದ ಯುಗಕ್ಕೆ ಕಾಲಿಡುತ್ತಿವೆ. ಒಂದೇ ವರ್ಷದಲ್ಲಿ ಪ್ರಪಂಚದಲ್ಲಿ ವೈರಸ್​ನಿಂದಾದ ಸಾವು-ನೋವು ದೇಶದ ಕಳಪೆ ಆರೋಗ್ಯ ಮೂಲಸೌಕರ್ಯಗಳ ಸಮಸ್ಯೆಯನ್ನು 'ಆರ್ಥಿಕ ಚರ್ಚೆ'ಯ ಕೇಂದ್ರ ಹಂತಕ್ಕೆ ತಂದಿಟ್ಟಿದೆ. ಆರಂಭದ ತಿಂಗಳುಗಳಲ್ಲಿ ದೇಶವು ಏಕಾಏಕಿ ಔಷಧಿಗಳು, ಮಾಸ್ಕ್​ಗಳು, ವೆಂಟಿಲೇಟರ್‌ಗಳಂತಹ ಅವಶ್ಯಕ ಸಲಕರಣೆಗಳ ಕೊರತೆಯನ್ನು ಎದುರಿಸಿತು. ರೈಲ್ವೆ ಬೋಗಿಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಕಾರಣವಾಯಿತು. ಕೇವಲ ಆಸ್ಪತ್ರೆಗಳನ್ನಲ್ಲ, ಜನಸಂಖ್ಯೆ ಸಾಮರ್ಥ್ಯದ ಆಧಾರದ ಮೇಲೆ ಆಸ್ಪತ್ರೆಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ಹೀಗಾಗಿ ಬಜೆಟ್​ನಲ್ಲಿ ಆರೋಗ್ಯ ವಲಯಕ್ಕೆ ಪ್ರಾದಾನ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಕೋವಿಡ್​ ಬಳಿಕ ಜೀವನೋಪಾಯವು ಹೊಸ ಸವಾಲಾಗಿದೆ. ಸಣ್ಣ, ಮಧ್ಯಮ ಅಥವಾ ದೊಡ್ಡ ಕೈಗಾರಿಕೆಗಳಾಗಿರಲಿ, ಅದರದಲ್ಲಿ ಸ್ವತಃ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಬದಲಾವಣೆ ಸಾಧ್ಯವಾಗಲಿದೆ. ದೇಶದ ಯುವಜನತೆಗೆ ಸರಿಯಾದ ರೀತಿಯ ವೃತ್ತಿಪರ ಕೌಶಲ್ಯ ಮತ್ತು ಉದ್ಯೋಗವನ್ನು ನೀಡುವುದು ನಮ್ಮ ಜವಾಬ್ದಾರಿ ಎಂದ ಸಚಿವರು, ಕೆಲಸದ ಸ್ಥಳಗಳಲ್ಲಿ ಹೆಚ್ಚೆಚ್ಚು ಮಹಿಳೆಯರ ಭಾಗವಹಿಸುವಿಕೆಗೆಗೆ ಒತ್ತು ನೀಡುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.