ETV Bharat / bharat

ಈ ಬಜೆಟ್​​​​​​​​ ದೇಶದ ಈಗಿನ ಅಗತ್ಯತೆ-ಭವಿಷ್ಯದ ನಿರೀಕ್ಷೆಗಳನ್ನು ಈಡೇರಿಸಲಿದೆ: ಪ್ರಧಾನಿ ಮೋದಿ - ಕೇಂದ್ರ ಬಜೆಟ್​2020

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2020-21ರ ಬಜೆಟ್​​ ಮಂಡನೆ ಮಾಡಿದ್ದು, ಈ ಬಜೆಟ್​​ ಅಂತ್ಯಂತ ಪರಿಣಾಮಕಾರಿಯಾಗಿದೆ. ದೇಶದ ಈಗಿನ ಅಗತ್ಯತೆ ಹಾಗೂ ಭವಿಷ್ಯದ ನಿರೀಕ್ಷೆಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Modi
ಪ್ರಧಾನಿ ಮೋದಿ ಹೇಳಿಕೆ
author img

By

Published : Feb 1, 2020, 7:35 PM IST

ನವದೆಹಲಿ: 2020-21ರ ಬಜೆಟ್ ದೇಶದ ಈಗಿನ ಅಗತ್ಯತೆ ಹಾಗೂ ಭವಿಷ್ಯದ ನಿರೀಕ್ಷೆಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಜೆಟ್ ಆದಾಯ ಮತ್ತು ಹೂಡಿಕೆ ಕ್ಷೇತ್ರ, ಬೇಡಿಕೆ ಮತ್ತು ಉತ್ಪಾದನೆ ಹೆಚ್ಚಿಸುವಲ್ಲಿ ಹಾಗೂ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಚೈತನ್ಯ ತರಲಿದೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಬಜೆಟ್ ನಂತರದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

90ನೇ ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳನ್ನು ಹೇಳಿದ ಮೋದಿ, ವಿದೇಶಿ ಹೂಡಿಕೆ ಆಕರ್ಷಿಸಲು ಹಲವಾರು ತೆರಿಗೆ ರಿಯಾಯಿತಿಗಳನ್ನು ಈ ಬಜೆಟ್​​ನಲ್ಲಿ ಘೋಷಿಸಲಾಗಿದೆ. ಸ್ಟಾರ್ಟ್ ಅಪ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ತೆರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ

ಮಾರುಕಟ್ಟೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಹಾಗೂ ಹಣಕಾಸು ವ್ಯವಸ್ಥೆ ಬಲಪಡಿಸಲು ಈ ಬಜೆಟ್​​ನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳಿಂದಾಗಿ ಆರ್ಥಿಕತೆಯನ್ನು ವೇಗವಾಗಿ ಹೆಚ್ಚಿಸಬಹುದಾಗಿದೆ. ಅಲ್ಲದೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.

ದೇಶದಲ್ಲಿ 100 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಇದರಿಂದಾಗಿ ಪ್ರವಾಸೋದ್ಯಮ ಹಾಗೂ ಉದ್ಯೋಗ ಮತ್ತು ಆದಾಯ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸು ಕಾಣಬಹುದಾಗಿದೆ ಎಂದಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.