ನವದೆಹಲಿ: ಮುಪ್ಪಿನ ಭಾರತೀಯ ರೈಲ್ವೆಗೆ ಈಗ 167ರ ಪ್ರಾಯ. ಬದುಕಿನ ಉದ್ಯಮ ಕ್ಷೇತ್ರಗಳಲ್ಲಿ ಪ್ರತಿಫಲಿಸಿರುವ ಪೀಳಿಗೆಗಳ ಪರಿವರ್ತನೆ ರೈಲ್ವೆಯಲ್ಲಿಯೂ ಒಡಮೂಡಿದೆ.
ತಂತ್ರಜ್ಞಾನದ ಗಾಲಿಗಳು ದಿನಮಾನಕ್ಕೆ ಅನುಗುಣವಾಗಿ ಉರುಳದಂತೆ ರೈಲ್ವೆಯೂ ತನ್ನ ರೂಪಕಗಳನ್ನು ಬದಲಿಸಿಕೊಂಡಿದೆ. 1853ರಲ್ಲಿ ಮುಂಬೈ- ಥಾಣೆಯ 33 ಕಿ.ಮೀ. ಅಂತರದಲ್ಲಿ ತನ್ನ ಮೊದಲ ಅಡಿ ಇಟ್ಟ ರೈಲು, 400 ಅತಿಥಿಗಳನ್ನು ಹೊತ್ತು ಸಾಗಿತ್ತು. ದಟ್ಟ ಹೊಗ್ಗೆಯಿಂದ ಸಾಗಿ ಹೋರಟ ರೈಲು 180 ಸ್ಪೀಡನ ವಂದೇ ಭಾರತ್ ಎಕ್ಸ್ಪ್ರೆಸ್ವರೆಗೂ ತಲುಪಿ; ಇಂದು ಕೋಟ್ಯಂತ ಭಾರತೀಯರ ನಿತ್ಯದ ಜೀವನಾಡಿಯಾಗಿದೆ.
92 ವರ್ಷಗಳ ಹಳೆಯ ಪದ್ಧತಿಗೆ ಇತಿಶ್ರೀ
ಬ್ರಿಟಿಷ್ ರೈಲ್ವೆ ಆರ್ಥಿಕ ತಜ್ಞ ವಿಲಿಯಂ ಆಕ್ವರ್ಥ್ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ರೈಲ್ವೆಗೆ ಪ್ರತ್ಯೇಕ ಬಜೆಟ್ ಮಂಡನೆ ಆರಂಭ ಆದದ್ದು 1924ರಲ್ಲಿ. 92 ವರ್ಷಗಳ ಈ ಹಳೆಯ ಪದ್ಧತಿ ಅಂತ್ಯಗೊಳಿಸಿ, 2017-18ನೇ ಸಾಲಿನ ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸಿದಾಗ ಹಲವರು ಅಪಸ್ವರ ಎತ್ತಿದ್ದರೂ ಮತ್ತೆ ಕೆಲವರು ಇದು ಅನಿವಾರ್ಯತೆ ಬೆನ್ನು ತಟ್ಟಿದರು.
40,000 ಕೋಟಿ ರೂ. ಆರ್ಥಿಕ ಹೊರೆ
1996ರ ನಂತರ ಮೈತ್ರಿ ಸರ್ಕಾರಗಳು ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ತರುವಾಯ ರೈಲ್ವೆ ಅಭಿವೃದ್ಧಿಗೆ ಕಿಂಚಿತ್ತೂ ಗಮನ ನೀಡದ ಅದನ್ನು ತಮ್ಮ ರಾಜಕೀಯ ವರ್ಚಸ್ಸಿಗೆ ಬೆಳೆಸಿಕೊಳ್ಳುವ ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಶೇ 75ರಷ್ಟು ಪ್ರಯಾಣ, ಶೇ 90ರಷ್ಟು ಸರಕು ಸಾಗಣೆ ನಡೆಯುತ್ತಿದ್ದ ರೈಲ್ವೆ ಇದರ ಪ್ರಮಾಣ ಶೇ 15 ಮತ್ತು ಶೇ 30ಕ್ಕೆ ಕುಸಿಯಿತು. ಇದರ ಪ್ರತಿಫಲವೆಂಬಂತೆ 40,000 ಕೋಟಿ ರೂಪಾಯಿಯ ಆರ್ಥಿಕ ರೈಲ್ವೆ ಇಲಾಖೆ ಹೊರಬೇಕಾಯಿತು.
ವಿಶ್ವದ 7ನೇ ಅತಿದೊಡ್ಡ ಉದ್ಯೋಗದಾತ
ಬ್ರಿಟಿಷರ ಕಾಲದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಪ್ರಕ್ರಿಯೆ ಕೈಬಿಡಬೇಕು ಎಂದು ನೀತಿ ಆಯೋಗದ ವಿವೇಕ್ ದೇವರಾಯ್ ಹಾಗೂ ಕೀಶೋರ್ ದೇಸಾಯಿ ಅವರಿದ್ದ ಸಮಿತಿ ಮೋದಿ ಸರ್ಕಾರಕ್ಕೆ ಸಲಹೆ ನೀಡಿತ್ತು. ಅಂತೆಯೇ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ಜತೆ ವೀಲಿನಗೊಂಡ ನಂತರ ಸರ್ಕಾರದ ಇತರ ಇಲಾಖೆಗಳ ರೀತಿಯಲ್ಲಿ ರೈಲ್ವೆ ಇಲಾಖೆ ಕೂಡ ಬಜೆಟ್ ಅನುದಾನ ಪಡೆಯಿತು. ವಿಶ್ವದ ಏಳನೆಯ ಅತಿದೊಡ್ಡ ಉದ್ಯೋಗದಾತ ಭಾರತೀಯ ರೈಲ್ವೆ, ಈಗ ಸಾಮನ್ಯ ಬಜೆಟ್ನಲ್ಲಿ ಒಂದು ಅನುದಾನಿದತ ಇಲಾಖೆಯಷ್ಟೆ.
ಸುರೇಶ್ ಪ್ರಭು ಕೊನೆಯ ರೈಲ್ವೆ ಬಜೆಟ್ ಮಂಡಿಸಿದ ಸಚಿವ...
2016 ಫೆಬ್ರವರಿ 25 ರಂದು ರೈಲ್ವೆ ಸಚಿವ ಸುರೇಶ್ ಪ್ರಭು ಕೊನೆಯ ಬಾರಿಗೆ ರೈಲ್ವೆ ಬಜೆಟ್ ಮಂಡನೆ ಮಾಡಿದ ಸಚಿವರೆಂಬ ಹೆಗ್ಗಳಿಕೆ ಪಡೆಯುವ ಮೂಲಕ ಇತಿಹಾಸ ಸೇರಿದರು. ಇನ್ನು 2017 ರ ಫೆಬ್ರವರಿ ಒಂದರಂದು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಸಾಮಾನ್ಯ ಬಜೆಟ್ನಲ್ಲೇ ರೈಲ್ವೆ ಬಜೆಟ್ ಸೇರಿಸಿ ಕಾಮನ್ ಬಜೆಟ್ ಮಂಡಿಸಿದ ಮೊದಲ ಸಚಿವರಾಗಿ ಇತಿಹಾಸದಲ್ಲಿ ದಾಖಲರಾದರು. ಇನ್ನೇನು ಜುಲೈ 5 ರಂದು ಕೇಂದ್ರ ಸರ್ಕಾರ ತನ್ನ ಎರಡನೇ ಅವಧಿಯ ಮೊದಲ ಬಜೆಟ್ ಮಂಡಿಸಲಿದೆ. ಈ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.