ನವದೆಹಲಿ: ಉತ್ತರ ಪ್ರದೇಶದಲ್ಲಿ ಶಾಮ್ಲಿ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅನುಮಾನಿಸಿ, ಹಗ್ಗದ ವ್ಯಾಪಾರ ಮಾಡಲು ಬಂದಿದ್ದ ಮಹಿಳೆಯರ ಮೇಲೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್, ಸಾಮೂಹಿಕ ಹಲ್ಲೆ ಅಥವಾ ಹತ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದರು.
-
Mayawati bats for strong laws to curb mob lynching
— ANI Digital (@ani_digital) August 28, 2019 " class="align-text-top noRightClick twitterSection" data="
Read @ANI story | https://t.co/HEx9W2CHbi pic.twitter.com/IG4zNZW5Q3
">Mayawati bats for strong laws to curb mob lynching
— ANI Digital (@ani_digital) August 28, 2019
Read @ANI story | https://t.co/HEx9W2CHbi pic.twitter.com/IG4zNZW5Q3Mayawati bats for strong laws to curb mob lynching
— ANI Digital (@ani_digital) August 28, 2019
Read @ANI story | https://t.co/HEx9W2CHbi pic.twitter.com/IG4zNZW5Q3
ಈ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿರುವ ಬಿಎಸ್ಪಿ ನಾಯಕಿ ಮಾಯಾವತಿ, ಈ ಅಪಾಯಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತಂದು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.
ಹಗ್ಗ ಮಾರಾಟಕ್ಕೆ ಬಂದ ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿತ..! ಕಾರಣ..?
ಮಕ್ಕಳ ಕಳ್ಳಿ ಎಂಬ ನೆಪದಲ್ಲಿ ಲೋನಿ ಏರಿಯಾದಲ್ಲಿ ಜನ ಅಮಾಯಕ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸುದ್ದಿ ಹೊರ ಹಾಕಿದರು. ಮಹಿಳೆ ತನ್ನ ಅಜ್ಜಿ ಜೊತೆ ಶಾಪಿಂಗ್ಗೆ ತೆರಳಿದ್ದಾಗ ಜನ ಹಲ್ಲೆ ನಡೆಸಿದ್ದರು.
ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.