ETV Bharat / bharat

ಅಂತಾರಾಷ್ಟ್ರೀಯ ಡ್ರಗ್ಸ್​, ಶಸ್ತ್ರಾಸ್ತ್ರ ಸಾಗಾಟ ಜಾಲ ಪತ್ತೆ; ಮೂವರ ಬಂಧನ

author img

By

Published : Aug 2, 2020, 7:56 PM IST

ಖಚಿತ ಮಾಹಿತಿಯ ಮೇರೆಗೆ ಜುಲೈ 26 ರಂದು ಜಾಲಂಧರ್ ಪೊಲೀಸರು, ದೆಹಲಿಯಿಂದ ಕಾರಿನಲ್ಲಿ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇವರ ಬಳಿಯಿಂದ 25 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ಇವರಿಬ್ಬರನ್ನು ವಿಚಾರಣೆ ಮಾಡಲಾಗಿ ಹಲವಾರು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

bsf-constable-among-three-arrested-in-drug-racket-in-punjab
ಡ್ರಗ್ಸ್​​ ರಾಕೇಟ್​​ ದಂಧೆ

ಚಂಡೀಗಢ; ಮಾದಕ ದ್ರವ್ಯ ಸಾಗಾಟದ ಬೃಹತ್ ಜಾಲವೊಂದನ್ನು ಭೇದಿಸಿರುವ ಪಂಜಾಬ್ ಪೊಲೀಸರು, ಗಡಿ ಭದ್ರತಾ ಪಡೆಯ ಯೋಧ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಾಟದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಗಡಿ ಭದ್ರತಾ ಪಡೆಯ ಯೋಧ​​ ರಾಜೇಂದ್ರ ಪ್ರಸಾದ್​​ ಮತ್ತು ಸ್ಥಳೀಯ ನಿವಾಸಿಗಳಾದ ಸುರಮೈಲ್​​ ಸಿಂಗ್, ಗುರ್ಜಂತ್​ ಸಿಂಗ್​ ಎಂದು ಗುರುತಿಸಲಾಗಿದೆ.

ಬಂಧಿಸಲ್ಪಟ್ಟಿರುವ ಬಿಎಸ್​ಎಫ್​ ಯೋಧ ರಾಜೇಂದ್ರ ಪ್ರಸಾದ್, ರಾಜಸ್ಥಾನದ ಗಂಗಾ ನಗರ ನಿವಾಸಿಯಾಗಿದ್ದು, ತರನ್ ತಾರನ್ ಜಿಲ್ಲೆಯ ಛಿನಾ ಗ್ರಾಮದ ಬಳಿಯ ಗಡಿ ಔಟ್​ಪೋಸ್ಟ್​ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದನು.

ಖಚಿತ ಮಾಹಿತಿಯ ಮೇರೆಗೆ ಜುಲೈ 26 ರಂದು ಜಾಲಂಧರ್ ಪೊಲೀಸರು, ದೆಹಲಿಯಿಂದ ಕಾರಿನಲ್ಲಿ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇವರ ಬಳಿಯಿಂದ 25 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ಇವರಿಬ್ಬರನ್ನು ವಿಚಾರಣೆ ಮಾಡಲಾಗಿ ಹಲವಾರು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ತರನ್ ತಾರನ್ ಜಿಲ್ಲೆ ನಿವಾಸಿ​ ಸತ್ನಾಮ್ ಸಿಂಗ್​ ಅಲಿಯಾಸ್​ ಸಟ್ಟಾ ಎಂಬ ಕುಖ್ಯಾತ ಅಂತಾರಾಷ್ಟ್ರೀಯ ಸ್ಮಗ್ಲರ್​ನೊಂದಿಗೆ ತಾವು ಕೆಲಸ ಮಾಡುತ್ತಿರುವುದಾಗಿ ಬಂಧಿತರು ಬಾಯಿ ಬಿಟ್ಟಿದ್ದಾರೆ. ಪಾಕಿಸ್ತಾನ ಮೂಲದ ಡ್ರಗ್ಸ್​ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ತಂಡದೊಂದಿಗೆ ಈತ ನಿಕಟ ಸಂಪರ್ಕ ಹೊಂದಿದ್ದಾನೆ.

ಇದೇ ತಂಡದೊಂದಿಗೆ ಬಿಎಸ್​ಎಫ್​ ಯೋಧ ರಾಜೇಂದ್ರ ಪ್ರಸಾದ್ ಸಹ ಡ್ರಗ್ಸ್​ ಕಳ್ಳಸಾಗಾಣಿಕೆ ಜಾಲದಲ್ಲಿ ಭಾಗಿಯಾಗಿದ್ದಾನೆ ಎಂಬುದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಈತನನ್ನು ಸಹ ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈತ ತಾನು ಕರ್ತವ್ಯ ನಿರ್ವಹಿಸುವ ಗಡಿಯಲ್ಲಿ, ಡ್ರಗ್ಸ್​ ಹಾಗೂ ಶಸ್ತ್ರಾಸ್ತ್ರಗಳನ್ನು ಗಡಿ ದಾಟಿಸಲು ಸಹಾಯ ಮಾಡಿದರೆ ಹಣ ನೀಡುವುದಾಗಿ ಸತ್ನಾಮ್ ಸಿಂಗ್ ಆಮಿಷವೊಡ್ಡಿದ್ದ ಎಂದು ಹೇಳಿದ್ದಾನೆ.

ಸತ್ನಾಮ್ ಸಿಂಗ್ ಆದೇಶದ ಮೇರೆಗೆ ಪಾಕಿಸ್ತಾನದಿಂದ 17 ಕೆಜಿ ಹೆರಾಯಿನ್ ಮತ್ತು 2 ಪಿಸ್ತೂಲ್​ಗಳನ್ನು ಭಾರತದ ಗಡಿಯೊಳಗೆ ಬರಲು ಅವಕಾಶ ನೀಡಿರುವುದಾಗಿ ರಾಜೇಂದ್ರ ಪ್ರಸಾದ್ ತಪ್ಪೊಪ್ಪಿಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.