ಪಿಥೋರಗರ್: ಭಾರೀ ಉಪಕರಣ ಹೊತ್ತಿದ್ದ ಟ್ರಕ್ ಇಂಡೋ-ಚೀನಾ ಗಡಿ ಸಮೀಪದ ಸೇತುವೆ ದಾಟುತಿದ್ದ ವೇಳೆ ಸೇತುವೆ ಕುಸಿದು ಬಿದ್ದಿದೆ.
ಲಿಲಾಮ್ ಜೋಹರ್ ಕಣಿವೆಯ ಮುನ್ಸಾರಿ ತಹಸಿಲ್ನ ಧಾಪಾ-ಮಿಲಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಚಾಲಕ ಸೇರಿದಂತೆ ಟ್ರಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಲಾಮ್‌ನಿಂದ ಚೀನಾ ಗಡಿ ಕಡೆಗೆ 65 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಈ ಉಪಕರಣವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ಸೇತುವೆ ಕುಸಿದ ಕಾರಣ ಗಡಿ ಪ್ರದೇಶದ ಸುತ್ತಮುತ್ತಲಿನ 12 ಹಳ್ಳಿಗಳ 7 ಸಾವಿರಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿದೆ. ಸೈನಿಕರು ಮತ್ತು ಐಟಿಬಿಪಿ ಸಿಬ್ಬಂದಿ ಸಂಚಾರಕ್ಕೂ ತೊಂದರೆಯಾಗಿದೆ.