ETV Bharat / bharat

ಕೊರೊನಾ ವೈರಸ್​: ಬಾಲಿವುಡ್​ ಹಿರಿಯ ನಿರ್ಮಾಪಕ ಅನಿಲ್​ ಸೂರಿ ನಿಧನ

author img

By

Published : Jun 6, 2020, 4:35 AM IST

ಮಹಾಮಾರಿ ಕೊರೊನಾ ವೈರಸ್​ನಿಂದ ಇದೀಗ ಬಾಲಿವುಡ್​ ನಿರ್ಮಾಪಕ ಅನಿಲ್​ ಸೂರಿ ಸಾವನ್ನಪ್ಪಿದ್ದು, ಅವರಿಗೆ 77 ವರ್ಷ ವಯಸ್ಸಾಗಿತ್ತು.

Bollywood Producer anil suri
Bollywood Producer anil suri

ಮುಂಬೈ: ಮಹಾರಾಷ್ಟ್ರದಲ್ಲಿ ಡೆಡ್ಲಿ ವೈರಸ್​ ಕೊರೊನಾ ರೌದ್ರನರ್ತನವಾಡ್ತಿದ್ದು, ಪ್ರತಿದಿನ ಅನೇಕ ಜೀವ ಬಲಿ ಪಡೆದುಕೊಳ್ಳುತ್ತಿದೆ. ಇದೀಗ ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಬಾಲಿವುಡ್​ನ ಹಿರಿಯ ನಿರ್ಮಾಪಕ ಅನಿಲ್​ ಸೂರಿ ಸಾವನ್ನಪ್ಪಿದ್ದು, ಅವರಿಗೆ 77 ವರ್ಷ ವಯಸ್ಸಾಗಿತ್ತು ಎಂದು ಅವರ ಸಹೋದರ ರಾಜೀವ್​ ಸೂರಿ ಮಾಹಿತಿ ನೀಡಿದ್ದಾರೆ.

ಕಳೆದ ಜೂನ್ 2 ರಂದು ಅನಿಲ್ ಅವರಿಗೆ ಜ್ವರ ಕಾಣಿಸಿಕೊಂಡಿತು. ಮರು ದಿನವೇ ಉಸಿರಾಟದ ಸಮಸ್ಯೆ ಉಲ್ಭಣಗೊಂಡಿದೆ. ಜೂನ್ 3 ರಂದು ಮುಂಬೈನ ಪ್ರಮುಖ ಆಸ್ಪತ್ರೆ ಲೀಲಾವತಿ, ಹಿಂದೂಜಾ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ಈ ಆಸ್ಪತ್ರೆಗಳು ನಿರಾಕರಿಸಿವೆ.

ಬುಧವಾರ ರಾತ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುರುವಾರ ಸಂಜೆ ವೆಂಟಿಲೇಟರ್​​ನಲ್ಲಿ ಇಡಲಾಗಿದೆ. ಆದರೆ ಗುರುವಾರ ಸಂಜೆ 7 ಗಂಟೆ ವೇಳೆಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅನಿಲ್​ ಸೂರಿ ನಟ ಅಮಿತಾಬ್​​ ಬಚ್ಚನ್​ ಸೇರಿದಂತೆ ಅನೇಕ ನಟರ ಸಿನಿಮಾ ನಿರ್ಮಿಸಿದ್ದರು. ಇದಕ್ಕೂ ಮುಂಚಿತವಾಗಿ ನಿರ್ದೇಶಕ ಬಸು ಚಟರ್ಜಿ ಕೂಡ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.