ETV Bharat / bharat

ಶಾಸಕನ ಬಾಡಿಗಾರ್ಡ್​​ ಗುಂಡು ಹಾರಿಸಿಕೊಂಡು ಆತ್ಮಹತ್ಯೆ - ಮೊರದಾಬಾದ್ ಶಾಸಕ

ಉತ್ತರಪ್ರದೇಶದ ಮೊರದಾಬಾದ್ ಶಾಸಕ ಡೆಹತ್ ಹಾಜಿ ಇಕ್ರಮ್ ಖುರೈಶಿ ಎಂಬುವರ ಬಾಡಿಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ
ಆತ್ಮಹತ್ಯೆ
author img

By

Published : Jun 4, 2020, 5:31 PM IST

ಮೊರದಾಬಾದ್​​(ಉತ್ತರಪ್ರದೇಶ): ಗುರುವಾರ ಬೆಳಗ್ಗೆ ಇಲ್ಲಿನ ಆದರ್ಶ್ ನಗರದ ಸ್ಥಳೀಯ ಶಾಸಕರ​​ ಭದ್ರತಾ ಸಿಬ್ಬಂದಿಯೊಬ್ಬರು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾನ್ಸ್​ಟೆಬಲ್​ ಮನೀಶ್ ಪ್ರತಾಪ್ ಸಿಂಗ್ (24) ಆತ್ಮಹತ್ಯೆಗೆ ಶರಣಾದವರು. ಈತನನ್ನು ಶಾಸಕ ಡೆಹತ್ ಹಾಜಿ ಇಕ್ರಮ್ ಖುರೈಶಿಯ ಬಾಡಿಗಾರ್ಡ್​​ ಆಗಿ ನಿಯೋಜಿಸಲಾಗಿತ್ತು. ಪ್ರತಾಪ್​ ಸಿಂಗ್​​​ ಸ್ನೇಹಿತರೊಬ್ಬರು ಗುರುವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಇಲ್ಲಿನ ಕಟ್ಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.