ನಕ್ಸಲರೊಂದಿಗೆ ನಡೆದ ಎನ್ಕೌಂಟರ್ ವೇಳೆ ನಾಪತ್ತೆಯಾಗಿದ್ದ 17 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ನಿನ್ನೆ ಛತ್ತೀಸ್ಘಡದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದ್ದ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ 17 ಮಂದಿ ಪೊಲೀಸರು ಹುತಾತ್ಮರಾಗಿದ್ದು ಅವರ ಮೃತದೇಹಗಳನ್ನು ಅರಣ್ಯದಿಂದ ಹೊರಕ್ಕೆ ತರಲಾಗುತ್ತಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 2.30ಕ್ಕೆ ಚಿಂತಗುಫ ಪ್ರದೇಶದ ಕೋರಂಜ್ಗುಡಾ ಬಳಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿತ್ತು.
ಈ ಕಾರ್ಯಾಚರಣೆಯಲ್ಲಿ ಕೋಬ್ರಾ, ಜಿಲ್ಲಾ ಮೀಸಲು ಪಡೆ, ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ನ 600ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.ಈ ಪಡೆಗಳು ಚಿಂತಗುಫ, ಬುರ್ಕಪಾಲ್, ತಿಮೆಲ್ವಾಡ ಮುಂತಾದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ 14 ಮಂದಿ ಪೊಲೀಸರು ಗಾಯಗೊಂಡಿದ್ದರು. ಎನ್ಕೌಂಟರ್ ವೇಳೆ 13 ಮಂದಿ ಪೊಲೀಸರು ಸಂಜೆ ವೇಳೆಗೆ ನಾಪತ್ತೆಯಾಗಿದ್ದರು. ಈಗ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು. ಐದು ಮಂದಿ ನಕ್ಸಲರು ಕಾರ್ಯಚರಣೆ ಈ ವೇಳೆ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.