ETV Bharat / bharat

ಮೂರು ಪ್ರತ್ಯೇಕ ದೋಣಿ ದುರಂತ: 15 ಮಂದಿ ನೀರು ಪಾಲು - ಖಗೇರಿಯಾ ಜಿಲ್ಲೆಯಲ್ಲಿ ದೋಣಿ ಮಗುಚಿ ಹತ್ತು ಮಂದಿ ಮೃತ

ಬಿಹಾರದಲ್ಲಿ ನಡೆದ ಪ್ರತ್ಯೇಕ ಮೂರು ದೋಣಿಗಳ ದುರಂತದಲ್ಲಿ ಒಟ್ಟು 15 ಮಂದಿ ನೀರು ಪಾಲಾಗಿದ್ದಾರೆ. ಖಗೇರಿಯಾದಲ್ಲಿ ಸುಮಾರು 30 ಮಂದಿ ದೋಣಿಯಲ್ಲಿ ನದಿ ದಾಟುತ್ತಿದ್ದರು. ಇವರಲ್ಲಿ 10 ಮಂದಿ ನೀರು ಪಾಲಾಗಿದ್ದಾರೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಅಲೋಕ್ ರಂಜನ್ ಘೋಷ್ ಹೇಳಿದ್ದಾರೆ. 12 ಜನರು ಈಜಿ ದಡ ಸೇರಿದರೆ, ಇನ್ನುಳಿದವರ ಮಾಹಿತಿ ಸಿಕ್ಲಿಲ್ಲ ಎಂದು ರಾಜ್ಯ ವಿಪತ್ತು ಪಡೆ ಹೇಳಿದೆ. ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆದಿದೆ.

ಪ್ರತ್ಯೇಕ ದೋಣಿ ದುರಂತ 15 ಮಂದಿ ನೀರು ಪಾಲು
ಪ್ರತ್ಯೇಕ ದೋಣಿ ದುರಂತ 15 ಮಂದಿ ನೀರು ಪಾಲು
author img

By

Published : Aug 6, 2020, 7:12 AM IST

ಖಗರಿಯಾ / ಪಾಟ್ನಾ: ಬಿಹಾರದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಮೂರು ದೋಣಿ ದುರಂತದಲ್ಲಿ ಕನಿಷ್ಠ 15 ಮಂದಿ ನೀರು ಪಾಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಗೇರಿಯಾ ಜಿಲ್ಲೆಯಲ್ಲಿ ದೋಣಿ ಮಗುಚಿ ಹತ್ತು ಮಂದಿ ಮೃತಪಟ್ಟಿರುವ ವರದಿಯಾಗಿದೆ. ಸಹರ್ಸಾದಲ್ಲಿ ಮೂವರು ಮತ್ತು ದರ್ಭಂಗ್​​ನಲ್ಲಿ ಎರಡು ಸಾವು ಸಂಭವಿಸಿವೆ. ಮಂಗಳವಾರ ತಡರಾತ್ರಿ ಮಾನ್ಸಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಬರುವ ಗಂಡಕ್ ನದಿಯಲ್ಲಿ ದೋಣಿ ಅಪಘಾತಕ್ಕೀಡಾಗಿ 10 ಮಂದಿ ಸಾವನ್ನಪ್ಪಿದ್ದಾರೆ.

ಸುಮಾರು 30 ಮಂದಿ ದೋಣಿಯಲ್ಲಿ ನದಿ ದಾಟುತ್ತಿದ್ದರು ಎಂದು ಖಗೇರಿಯಾ ಜಿಲ್ಲಾಧಿಕಾರಿ ಅಲೋಕ್ ರಂಜನ್ ಘೋಷ್ ಹೇಳಿದ್ದಾರೆ. 12 ಜನರು ಈಜಿ ದಡ ಸೇರಿದರೆ, ಇನ್ನುಳಿದವರ ಮಾಹಿತಿ ಸಿಕ್ಲಿಲ್ಲ ಎಂದು ಅವರು ತಿಳಿಸಿದ್ದು, ರಾಜ್ಯ ವಿಪತ್ತು ಪಡೆ ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆಸಿದೆ.

  • खगड़िया ज़िले में तकरीबन 40 लोगों से भरी नाव पलटने से हुई हृदय विदारक घटना में कई लोग डूब गए। 10 शव बरामद कर लिए गए है अन्य लापता है।

    यह दुःखद खबर सुनकर मर्माहत हूँ। भगवान मृतकों की आत्मा को शांति और उनके परिजनों को दुःख सहने की शक्ति प्रदान करे।

    — Tejashwi Yadav (@yadavtejashwi) August 5, 2020 " class="align-text-top noRightClick twitterSection" data=" ">

ಮೃತಪಟ್ಟ ಹತ್ತು ಜನರಲ್ಲಿ ಐದು ಮಹಿಳೆಯರು ಮತ್ತು ಐದು ಪುರುಷರು ಸೇರಿದ್ದಾರೆ. ಇದರಲ್ಲಿ 10 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿಯೂ ಇದ್ದಾರೆ. ದರ್ಭಂಗದ ಹಯಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ 13 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಕರೇಹ್ ನದಿಯಲ್ಲಿ ಪಲ್ಟಿಯಾಗಿತ್ತು. 10 ಜನ ಈಜಿ ಸುರಕ್ಷಿತವಾಗಿ ದಡ ಮುಟ್ಟಿದರೆ ಇಬ್ಬರು ಮೃತಪಟ್ಟಿದ್ದಾರೆ. 16 ವರ್ಷದ ಬಾಲಕ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಶೋಧ ಮುಂದುವರೆದಿದೆ.

ತಲಾ ನಾಲ್ಕು ಲಕ್ಷ ರೂ ಪರಿಹಾರ ಘೋಷಣೆ

ಇನ್ನು ಸಹರ್ಸಾದ ಕೋಸಿ ನದಿಯಲ್ಲಿ 13 ಜನರನ್ನು ಕರೆದೊಯ್ಯುವ ದೋಣಿ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸಿಎಂ ನಿತೀಶ್​ ಕುಮಾರ್​ ಮೃತಪಟ್ಟವರಿಗೆ ತಲಾ ನಾಲ್ಕು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸೂಕ್ತ ನೆರವು ನೀಡಲು ಆಯಾ ಜಿಲ್ಲಾಡಳಿತಗಳಿಗೆ ಸಿಎಂ ಸೂಚಿಸಿದ್ದಾರೆ.

ತೇಜಶ್ವಿ ಯಾದವ್​ ಸಂತಾಪ

ಇನ್ನು ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್​ ಕೂಡಾ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.