ಹೈದರಾಬಾದ್: ಖಗೋಳದಲ್ಲಿ ವಿಶೇಷವಾದ ವಿಸ್ಮಯವೊಂದು ಇಂದು ನಡೆಯಲಿದ್ದು, ಅಪರೂಪದ ಬ್ಲೂ ಮೂನ್(ಚಂದ್ರ) ದರ್ಶನವಾಗಲಿದೆ. 19 ವರ್ಷಗಳ ನಂತರ ಇದರ ದರ್ಶನವಾಗುತ್ತಿದೆ.
ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬ ಅರ್ಥವಲ್ಲ. ಬದಲಿಗೆ ತಿಂಗಳಿಗೆ ಒಮ್ಮೆ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರ ಇದೀಗ ಎರಡನೇಯ ಹುಣ್ಣಿಮೆ( ತಿಂಗಳಲ್ಲಿ ಎರಡು ಹುಣ್ಣಿಮೆ) ದಿನ ಕಾಣಿಸಿಕೊಳ್ಳುತ್ತಿರುವ ಕಾರಣ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ತುಂಬಾ ಅಪರೂಪವಾಗಿ ಈ ಸಂದರ್ಭ ಬರುವುದರಿಂದ ಅದಕ್ಕೆ ಈ ಹೆಸರು ಇಡಲಾಗಿದೆ.
ಅಕ್ಟೋಬರ್ 31ರ ರಾತ್ರಿ ಬ್ಲೂ ಮೂನ್ ಗೋಚರಿಸಲಿದೆ. ಈ ಹಿಂದೆ ಇದೇ ತಿಂಗಳ ಅಕ್ಟೋಬರ್ 1ರಂದು ಚಂದ್ರ ಕಾಣಿಸಿಕೊಂಡಿದ್ದ. ಆದರೆ ಇದೀಗ ಮತ್ತೊಮ್ಮೆ ಗೋಚರವಾಗುತ್ತಿದೆ. 2001ರ ಜೂನ್ ತಿಂಗಳಲ್ಲಿ ಈ ರೀತಿಯ ಬ್ಲೂ ಮೂನ್ ಈ ಹಿಂದೆ ಕಾಣಿಸಿಕೊಂಡಿತ್ತು. ಇದಾದ ಬಳಿಕ 2050ರ ಸೆ. 30ರಂದು ಮುಂದಿನ ಬ್ಲೂ ಮೂನ್ ಕಾಣಿಸಿಕೊಳ್ಳಲಿದೆ.