ETV Bharat / bharat

ದೆಹಲಿ ಚುನಾವಣೆ: ಅಮಿತ್​ ಶಾ - ಕೇಜ್ರಿವಾಲ್​ ನಡುವೆ ಸವಾಲು- ಪ್ರತಿ ಸವಾಲು! ಟ್ವೀಟ್​ ಸಮರ ಹೇಗಿದೆ ಗೊತ್ತೇ?

ಟ್ವೀಟ್​ ಒಂದನ್ನು ಮಾಡಿರುವ ಅಮಿತ್ ಶಾ, "ಅರವಿಂದ್​ ಕ್ರೇಜ್ರಿವಾಲ್​​ ಅವರೇ ನೀವು ದೆಹಲಿ ಸರ್ಕಾರ ನಡೆಸುತ್ತಿರುವ ಶಾಲೆಗಳಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದೀರಿ. ದೆಹಲಿಯ 8 ಬಿಜೆಪಿ ಸಂಸದರು ದೆಹಲಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಿಮ್ಮ ಶೈಕ್ಷಣಿಕ ಕ್ರಾಂತಿ ಕಣ್ತುಂಬಿಕೊಂಡಿದ್ದಾರೆ. ಈಗ ದೆಹಲಿಯ ಜನತೆಗೆ ನೀವು ಉತ್ತರ ಕೊಡಬೇಕು" ಎಂದು ಟಾಂಗ್​ ನೀಡಿದ್ದಾರೆ.

education revolution
ಕ್ರೇಜ್ರಿವಾಲ್ ಆಹ್ವಾನಕ್ಕೆ ಶಾ ತಿರುಗೇಟು
author img

By

Published : Jan 28, 2020, 6:29 PM IST

ನವದೆಹಲಿ: ಸ್ವಲ್ಪ ಸಮಯ ತೆಗೆದುಕೊಂಡು ದೆಹಲಿ ಸರ್ಕಾರ ನಡೆಸುತ್ತಿರುವ ಶಾಲೆಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕ್ರೇಜ್ರಿವಾಲ್ ನೀಡಿರುವ ಆಹ್ವಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಗೆ ತಿರುಗೇಟು ನೀಡಿದ್ದಾರೆ.

  • अरविंद केजरीवाल जी आपने मुझे दिल्ली सरकार द्वारा संचालित स्कूल देखने के लिए बुलाया था। कल दिल्ली भाजपा के आठों सांसद अलग-अलग स्कूल में गए और देखिए इनका क्या हाल है...

    इनकी बदहाली ने आपकी ‘शिक्षा की क्रांति’ के दावों की पोल खोल दी।

    अब आपको दिल्ली की जनता को जवाब देना होगा... pic.twitter.com/gjzgaix2rA

    — Amit Shah (@AmitShah) January 28, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಅಮಿತ್ ಶಾ, "ಅರವಿಂದ್​ ಕೇಜ್ರಿವಾಲ್​​ ಅವರೇ ನೀವು ದೆಹಲಿ ಸರ್ಕಾರ ನಡೆಸುತ್ತಿರುವ ಶಾಲೆಗಳಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದೀರಿ. ದೆಹಲಿಯ 8 ಬಿಜೆಪಿ ಸಂಸದರು ದೆಹಲಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಿಮ್ಮ ಶೈಕ್ಷಣಿಕ ಕ್ರಾಂತಿಯನ್ನು ಕಣ್ತುಂಬಿಕೊಂಡಿದ್ದಾರೆ. ಈಗ ದೆಹಲಿಯ ಜನತೆಗೆ ನೀವು ಉತ್ತರ ಕೊಡಬೇಕು" ಎಂದು ಟಾಂಗ್​ ನೀಡಿದ್ದಾರೆ.

ಅಮಿತ್​ ಶಾ ಟ್ವೀಟ್​ ಮಾಡಿದ ಒಂದು ದಿನದ ಹಿಂದೆ ಬಿಜೆಪಿ ಸಂಸದರು ದೆಹಲಿಯ ಶಾಲೆಗಳಿಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ, ಸರಣಿ ಫೋಟೊಗಳನ್ನು ಟ್ವೀಟ್​ ಮಾಡಿದ್ದು, ಇದರಲ್ಲಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ನಿಂತಿರುವುದು ಮತ್ತು ಊಟದ ವಿರಾಮ ಸೇರಿ ದಿನದಲ್ಲಿ ಕೇವಲ ಎರಡು ಗಂಟೆ ತರಗತಿ ನಡೆಯುವುದು ಸೇರಿದಂತೆ ದೆಹಲಿಯ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಹಂಚಿಕೊಂಡಿದ್ದರು.

  • Oh my God.. what are you up to @ArvindKejriwal & @msisodia ? अपने सरकारी स्कूलो में गंदा ज़हरीला पानी पिलवाते हो, सिर्फ़ 2 घंटे प्रतिदिन बच्चों को पढ़ाई मिलती है और ज़हरीला बदबूदार पानी पिला उनके सेहत और भविष्य से खिलवाड़ मत करो. #DilliKaPaaniZehrila https://t.co/YWiBKQajGT pic.twitter.com/5FeEuVe9e3

    — Manoj Tiwari (@ManojTiwariMP) January 28, 2020 " class="align-text-top noRightClick twitterSection" data=" ">

"ದೆಹಲಿ ಸರ್ಕಾರ ವಿಶ್ವ ದರ್ಜೆಯ ಶಾಲೆಗಳನ್ನು ಹೆಚ್ಚಿಸುವುದಾಗಿ ಹೇಳುತ್ತಲೇ ದಿನದಲ್ಲಿ ಕೇವಲ ಎರಡು ಗಂಟೆಗಳ ಕಾಲ ತರಗತಿ ನಡೆಸುತ್ತಿದೆ. ಇದರ ಜಾಹೀರಾತಿಗಾಗಿ ಆಮ್ ಆದ್ಮಿ ಪಕ್ಷ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಶಾಲೆಯ ಮೂಲ ವ್ಯವಸ್ಥೆಗಳನ್ನು ಒಮ್ಮೆ ನೋಡಿ, ಎಂತಹ ನಾಚಿಕೆಗೇಡು" ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.

ಇದರ ಮಧ್ಯೆ ಮಟಿಯಾಲ ಪ್ರದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಪಶ್ಚಿಮ ದೆಹಲಿಯ ಸಂಸದ ಪರ್ವೇಶ್​ ಸಿಂಗ್, ನಾಲ್ಕು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ಬರೆದಿರುವ ಪತ್ರವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆಯಿದೆ. ಇದೇ ಕಟ್ಟಡದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ ಎಂದು ಬರೆಯಲಾಗಿದೆ.

ಇನ್ನೋರ್ವ ಬಿಜೆಪಿ ಸಂಸದ ಗೌತಮ್ ಗಂಭೀರ್​ 55 ನಿಮಿಷಗಳ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕುಸಿದ ಶೌಚಾಲಯ ಮತ್ತು ಶಾಲೆಯ ಕಳಪೆ ಮೂಲಸೌಕರ್ಯಗಳ ಬಗ್ಗೆ ಹಂಚಿಕೊಂಡಿದ್ದಾರೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.