ನವದೆಹಲಿ: ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಹೇಳಿದ ವಿಚಾರಕ್ಕೆ ಸಂಸದೆ ಪ್ರಗ್ಯಾ ಸಿಂಗ್ ವಿರುದ್ಧ ಬಿಜೆಪಿ ಸಮನ್ಸ್ ಜಾರಿ ಬೆನ್ನಲ್ಲೇ ಲೋಕಸಭೆಯಲ್ಲಿ ಭೋಪಾಲ್ ಸಂಸದೆ ಕ್ಷಮೆ ಕೇಳಿದ್ದಾರೆ.
-
BJP MP Pragya Singh Thakur in Lok Sabha: My statements made in Parliament are being distorted. I respect Mahatma Gandhi's contribution to the nation. pic.twitter.com/1F3qp61iEY
— ANI (@ANI) November 29, 2019 " class="align-text-top noRightClick twitterSection" data="
">BJP MP Pragya Singh Thakur in Lok Sabha: My statements made in Parliament are being distorted. I respect Mahatma Gandhi's contribution to the nation. pic.twitter.com/1F3qp61iEY
— ANI (@ANI) November 29, 2019BJP MP Pragya Singh Thakur in Lok Sabha: My statements made in Parliament are being distorted. I respect Mahatma Gandhi's contribution to the nation. pic.twitter.com/1F3qp61iEY
— ANI (@ANI) November 29, 2019
"ನನಗೆ ಮಹಾತ್ಮ ಗಾಂಧಿ ದೇಶಕ್ಕಾಗಿ ಹಲವು ಕೊಡುಗೆ ನೀಡಿದ್ದಾರೆ, ಅವರ ಬಗ್ಗೆ ನನಗೆ ಗೌರವವಿದೆ. ನನ್ನ ಮಾತು ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ" ಎಂದು ಬಿಜೆಪಿ ಸಂಸದೆ ಪ್ರಗ್ಯಾ ಲೋಕಸಭೆ ಕಲಾಪದಲ್ಲಿ ಹೇಳಿದ್ದಾರೆ.
-
BJP MP Pragya Singh Thakur in Lok Sabha: I apologise If I have hurt any sentiments. pic.twitter.com/WWzwvbSppg
— ANI (@ANI) November 29, 2019 " class="align-text-top noRightClick twitterSection" data="
">BJP MP Pragya Singh Thakur in Lok Sabha: I apologise If I have hurt any sentiments. pic.twitter.com/WWzwvbSppg
— ANI (@ANI) November 29, 2019BJP MP Pragya Singh Thakur in Lok Sabha: I apologise If I have hurt any sentiments. pic.twitter.com/WWzwvbSppg
— ANI (@ANI) November 29, 2019
ಪ್ರಗ್ಯಾ ಕ್ಷಮೆಯಾಚನೆ ವೇಳೆ ವಿಪಕ್ಷಗಳು ಕೊಂಚ ಗದ್ದಲ ನಡೆಸಿದ್ದು, 'ಮಹಾತ್ಮ ಗಾಂಧಿ ಕಿ ಜೈ, ಡೌನ್ ಡೌನ್ ಗೋಡ್ಸೆ' ಎಂದು ಘೋಷಣೆ ಕೂಗಿದವು.
-
Ruckus by opposition leaders in Lok Sabha after BJP MP Pragya Singh Thakur makes statement in the House. Opposition leaders raise slogans of 'Mahatma Gandhi ki Jai, & 'Down, down Godse'. pic.twitter.com/GP0MulwMHd
— ANI (@ANI) November 29, 2019 " class="align-text-top noRightClick twitterSection" data="
">Ruckus by opposition leaders in Lok Sabha after BJP MP Pragya Singh Thakur makes statement in the House. Opposition leaders raise slogans of 'Mahatma Gandhi ki Jai, & 'Down, down Godse'. pic.twitter.com/GP0MulwMHd
— ANI (@ANI) November 29, 2019Ruckus by opposition leaders in Lok Sabha after BJP MP Pragya Singh Thakur makes statement in the House. Opposition leaders raise slogans of 'Mahatma Gandhi ki Jai, & 'Down, down Godse'. pic.twitter.com/GP0MulwMHd
— ANI (@ANI) November 29, 2019
ಲೋಕಸಭೆಯಲ್ಲಿ ಮಾತನಾಡುವ ವೇಳೆ ಗಾಂಧಿ ಹಂತಕನನ್ನು ಪ್ರಗ್ಯಾ ದೇಶಭಕ್ತ ಎಂದು ಬಣ್ಣಿಸಿದ್ದರು. ಈ ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಗ್ಯಾ ಮಾತಿಗೆ ಖಂಡಿಸಿದ್ದರು.
ಗೋಡ್ಸೆ 'ದೇಶಭಕ್ತ' ಎಂದ ಪ್ರಗ್ಯಾ: ಲೋಕಸಭೆಯಲ್ಲಿ ಬಿಜೆಪಿ ಸಂಸದೆಯಿಂದ ಎಡವಟ್ಟು, ಜೋಶಿ ಸ್ಪಷ್ಟನೆ
ಪ್ರಗ್ಯಾ ಹೇಳಿಕೆಯನ್ನು ಪ್ರಧಾನಿ ಮೋದಿ ಸಹ ವಿರೋಧಿಸಿದ್ದಾರೆ. ಪ್ರಗ್ಯಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿರಬಹುದು, ಆದರೆ ಅವರನ್ನು ನಾನು ಸಂಪೂರ್ಣವಾಗಿ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಲೋಕಸಭೆ ಚುನಾವಣೆ ವೇಳೆಯಲ್ಲೂ ಪ್ರಗ್ಯಾ, ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು. ಆ ವೇಳೆ ಸಹ ಇದು ರಾಜಕೀಯ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿತ್ತು.
ವಿವಾದಿತ ಹೇಳಿಕೆ: ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯಿಂದ ಪ್ರಗ್ಯಾಗೆ ಗೇಟ್ಪಾಸ್..!