ETV Bharat / bharat

ಕಾಶ್ಮೀರದಲ್ಲಿ ಸರಪಂಚ್​ನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು - ಭಯೋತ್ಪಾದಕ ದಾಳಿ

ಕಣಿವೆನಾಡಿನಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆಯುತ್ತಿದೆ. ಆಗಸ್ಟ್​ ನಾಲ್ಕರಂದು ಒಬ್ಬ ಸರಪಂಚ್ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಭಯೋತ್ಪಾದಕರು ಇಂದು ಓರ್ವ ಸರಪಂಚ್​ನನ್ನು ಕೊಂದಿದ್ದಾರೆ.

bjp sarpanch murdered
ಕೊಲೆಯಾದ ಬಿಜೆಪಿ ಸರಪಂಚ್
author img

By

Published : Aug 6, 2020, 10:42 AM IST

ಶ್ರೀನಗರ (ಜಮ್ಮು ಕಾಶ್ಮೀರ): ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಓರ್ವ ಬಿಜೆಪಿಯಿಂದ ಆಯ್ಕೆ ಆಗಿದ್ದ ಸರಪಂಚ್​ನನ್ನು ಅಪರಿಚಿತ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ಖಾಜಿಗುಂಡ್ ಬ್ಲಾಕ್‌ನ ವೆಸು ಗ್ರಾಮದಲ್ಲಿರುವ ಅಲಿ ಮಹಮ್ಮದ್​ ಎಂಬಾತನ ಮಗನಾದ ಸರಪಂಚ್ ಸಜಾದ್ ಅಹ್ಮದ್ ಖಾಂಡೆ ಎಂಬಾತನನ್ನು ಉಗ್ರರು ಕೊಂದು ಪರಾರಿಯಾಗಿದ್ದಾರೆ.

ಮನೆಯಿಂದ ಹೊರಗಡೆ ಇದ್ದಾಗ ಉಗ್ರರು ಫೈರಿಂಗ್ ನಡೆಸಿದ್ದು, ಸಜಾದ್ ಅಹ್ಮದ್ ಖಾಂಡೆ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅನಂತ್​ನಾಗ್​ನ​ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್​ 4ರ ಸಂಜೆ ಅಖ್ರಾನ್ ಖಾಜಿಗುಂಡ್​ ಎಂಬಲ್ಲಿ ಅಪರಿಚಿತ ಭಯೋತ್ಪಾದಕರು ದಾಳಿ ನಡೆಸಿದ್ದರ ಪರಿಣಾಮವಾಗಿ ಬಿಜೆಪಿ ಸರಪಂಚ್ ಆರೀಫ್​ ಅಹಮದ್ ತೀವ್ರವಾಗಿ ಗಾಯಗೊಂಡಿದ್ದರು.

48 ಗಂಟೆಗಳ ಅವಧಿಯಲ್ಲಿ ಬಿಜೆಪಿ ಸರಪಂಚ್​ಗಳ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದ್ದು, ಪೊಲೀಸರಿಂದ ತನಿಖೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.