ಕೋಲ್ಕತ್ತಾ : ಇಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ ಸುಜಾತಾ ಮೊಂಡಾಲ್ ಖಾನ್ಗೆ ವಿಚ್ಛೇದನ ನೀಡುವುದಾಗಿ ಆಕೆಯ ಪತಿ, ಸಂಸದ ಸೌಮಿತ್ರ ಖಾನ್ ಹೇಳಿದ್ದಾರೆ. ರಾಜಕೀಯ ನಮ್ಮ ವೈವಾಹಿಕ ಜೀವನವನ್ನು ಕೊನೆಗೊಳಿಸಿತು, ನಾನು ವಿಚ್ಚೇದನ ನೋಟಿಸ್ ಕಳಿಸುತ್ತೇನೆ ಎಂದಿದ್ದಾರೆ.
ಕಳೆದ ವರ್ಷದ ಲೋಕಸಭಾ ಚುನಾವಣೆಯ ವೇಳೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದ ಸೌಮಿತ್ರ ಖಾನ್ಗೆ ಬಿಶ್ನುಪುರ ಕ್ಷೇತ್ರ ಪ್ರವೇಶಿಸದಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಈ ವೇಳೆ ಪತಿಗಾಗಿ ಚುನಾವಣಾ ಪ್ರಚಾರ ಮಾಡಿ ಗೆಲ್ಲಿಸುವಲ್ಲಿ ಪತ್ನಿ ಸುಜಾತಾ ಮೊಂಡಾಲ್ ಖಾನ್ ಯಶಸ್ವಿಯಾಗಿದ್ದರು.
ಇದನ್ನೂ ಓದಿ : ಬಿಜೆಪಿ ಒಂದು 'ವಂಚಕರ ಪಕ್ಷ', ಅಮಿತ್ ಶಾ ಸುಳ್ಳಿನ ಸರಮಾಲೆ ಹೆಣೆದಿದ್ದಾರೆ: ಮಮತಾ ಬ್ಯಾನರ್ಜಿ
ಆದರೆ, ಇಂದು ಪತ್ನಿ ಸುಜಾತಾ ಮೊಂಡಾಲ್ ಟಿಎಂಸಿ ಸೇರಿದೊಡನೆ ಪ್ರತಿಕ್ರಿಯಿಸಿದ ಸೌಮಿತ್ರ ಖಾನ್, ನಾನು ಆಕೆಗೆ ವಿಚ್ಛೇದನ ಪತ್ರ ನೋಟಿಸ್ ಕಳಿಸುತ್ತೇನೆ. ನಮ್ಮ 10 ವರ್ಷದ ದಾಂಪತ್ಯ ಜೀವನ ರಾಜಕೀಯಕ್ಕೋಸ್ಕರ ಕೊನೆಗೊಂಡಿದೆ. ನಾನು ಇನ್ನು ಮುಂದೆ ಬಿಜೆಪಿಗಾಗಿ ಹೆಚ್ಚು ಶ್ರಮಪಟ್ಟು ಕೆಲಸ ಮಾಡುತ್ತೇನೆ ಎಂದಿದ್ದಾರೆ.