ETV Bharat / bharat

ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ಎಂಎಲ್​ಎ - ಉತ್ತರ ಪ್ರದೇಶ ಸುದ್ದಿ

ಪೆಟ್ರೋಲ್​ ಬಂಕ್​ ಸಿಬ್ಬಂದಿ ಪೆಟ್ರೋಲ್​ ಹಾಕುವ ವೇಳೆ ವಂಚಿಸಿದ್ದಾರೆ ಎಂದು ಆರೋಪಿಸಿರುವ ತಿರ್ವಾ ಕ್ಷೇತ್ರದ ಬಿಜೆಪಿ ಶಾಸಕ, ಪೆಟ್ರೋಲ್​ ಹಾಕುವ ಮುಂಚೆಯೇ ಮೀಟರ್ ಓಡಲಾರಂಭಿಸಿದರೂ ಪೈಪ್‌ನಿಂದ ಯಾವುದೇ ಪೆಟ್ರೋಲ್​ ಹೊರಬರುತ್ತಿರಲಿಲ್ಲ. ಇದನ್ನುವಿರೋಧಿಸಿದಾಗ ಕುಡಿದ ಅಮಲಿನಲ್ಲಿದ್ದ ಸಿಬ್ಬಂದಿ ನನ್ನ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾನೆ. ಆ ಸಂದರ್ಭ ನಾನು ಕೂಡಾ ಆತನಿಗೆ ಪ್ರತಿಯಾಗಿ ನಿಂದಿಸಿದ್ದೇನೆ ಎಂದು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

BJP MLA hurls expletives
ಬಿಜೆಪಿ ಎಂಎಲ್​ಎ
author img

By

Published : Jun 26, 2020, 4:40 PM IST

ಕನ್ನೌಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ತಿರ್ವಾ ಕ್ಷೇತ್ರದ ಬಿಜೆಪಿ ಶಾಸಕ ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಅಸಭ್ಯವಾಗಿ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಶಾಸಕ ಕೈಲಾಶ್ ಸಿಂಗ್ ರಜಪೂತ್, ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕರನ್ನು ನಿಂದಿಸಿದ್ದಾರೆ. ಅಲ್ಲದೆ ಪೆಟ್ರೋಲ್​ ಬಂಕ್​ ಅನ್ನು ಮುಚ್ಚಲು ಬೆದರಿಕೆ ಹಾಕಿದ್ದಾರೆ. ಸಿಬ್ಬಂದಿ ಮೇಲೆ ಶಾಸಕ ಹಲ್ಲೆಗೆ ಯತ್ನಿಸುತ್ತಿದ್ದಾಗ ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಂದು ಶಾಸಕನನ್ನು ತಡೆದಿದ್ದಾನೆ.

ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ಎಂಎಲ್​ಎ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಕೈಲಾಶ್ ಸಿಂಗ್, ಕಳೆದ ಜೂನ್ 22 ರಂದು ಕಾನ್ಪುರದಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಅಂದು ರಾತ್ರಿ 9:10ರ ಸುಮಾರಿಗೆ ಕಾರಿಗೆ ಇಂಧನ ತುಂಬಲು ಚಾಲಕ ತಿರ್ವಾದ ಪೆಟ್ರೋಲ್​ ಬಂಕ್‌ನಲ್ಲಿ ಕಾರು ನಿಲ್ಲಿಸಿದ್ದ. ಈ ವೇಳೆ ಪೆಟ್ರೋಲ್​ ಬಂಕ್​ ಸಿಬ್ಬಂದಿ ವಂಚಿಸಿದ್ದಾರೆ ಎಂದು ಆರೋಪಿಸಿದ ಶಾಸಕ, ಪೆಟ್ರೋಲ್​ ಹಾಕುವ ಮುಂಚೆಯೇ ಮೀಟರ್ ಓಡಲಾರಂಭಿಸಿದರೂ ಪೈಪ್‌ನಿಂದ ಯಾವುದೇ ಪೆಟ್ರೋಲ್​ ಹೊರಬರುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನು ಸಿಬ್ಬಂದಿಯ ಗಮಕ್ಕೆ ತಂದು ಪ್ರತಿಭಟಿಸಿದಾಗ, ಕುಡಿದ ಅಮಲಿನಲ್ಲಿದ್ದ ಆತ ನನ್ನ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾನೆ. ಆ ಸಂದರ್ಭ ನಾನು ಕೂಡಾ ಆತನಿಗೆ ಪ್ರತಿಯಾಗಿ ನಿಂದಿಸಿದ್ದೇನೆ ಎಂದು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.