ರಾಯಗಂಜ್(ಪಶ್ಚಿಮ ಬಂಗಾಳ): ಬಿಜೆಪಿ ಶಾಸಕ ದೇಬೇಂದ್ರನಾಥ್ ರಾಯ್ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆ ಸಮೀಪದ ಅಂಗಡಿಯೊಂದರ ವರಾಂಡದಲ್ಲಿ ಪತ್ತೆಯಾಗಿದ್ದಾರೆ.
ಹೇಮತಾಬಾದ್ ಪೊಲೀಸ್ ಠಾಣೆಯ ಬಾಲಿಯಾಮೋರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೇಬೇಂದ್ರನಾಥ್ ರಾಯ್ (65) ಹೇಮತಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ರಾಯ್‌ಗಂಜ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದು ಕೊಲೆ ಅಥವಾ ಆತ್ಮಹತ್ಯೆ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಶಾಸಕ ದೇಬೇಂದ್ರನಾಥ್ ರಾಯ್ ಅವರನ್ನು ದುಷ್ಕರ್ಮಿಗಳು ಕರೆಸಿಕೊಂಡು ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.