ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಿಜೆಪಿ ಸೋಲಿಗೆ ಪಕ್ಷದ ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಆ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆಗಳಿಂದ ಬಿಜೆಪಿ ದೂರ ಇರಬೇಕಿತ್ತು. ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರ ವಹಿಸುತ್ತೇವೆ ಎಂದರು.
ಸೋಲಿಗೆ ಕಾರಣಗಳು?
- ಸಿಎಎ ವಿರೋಧಿಸಿ ಶಾಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗೋಲಿಮಾರ್ ಎಂಬ ಹೇಳಿಕೆ ನೀಡಿದ್ದರು.
- ಅಲ್ಲದೆ, ಕಪಿಲ್ ಮಿಶ್ರಾ ಅವರು ಶಾಹೀನ್ಬಾಗ್ ಪ್ರತಿಭಟನೆಯನ್ನು ಮಿನಿ-ಪಾಕಿಸ್ತಾನ ಎಂದು ಕರೆದಿದ್ದರು.
- ಪ್ರತಿಭಟನಾಕಾರರು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಎಸಗಿ ಕೊಲ್ಲುತ್ತಾರೆ ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದರು. ಬಳಿಕ ಚುನಾವಣಾ ಆಯೋಗ ಅವರ ಪ್ರಚಾರಗಳಿಗೆ ನಿಷೇಧ ಹೇರಿತ್ತು.
ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಚುನಾವಣಾ ರ್ಯಾಲಿಗಳಲ್ಲಿ 'ದೇಶ್ಕೆ ಗದ್ದಾರಂಕೋ' (ದೇಶದ್ರೋಹಿ) ಎಂಬ ಹೇಳಿಕೆಗಳನ್ನು ನೀಡಬಾರದಿತ್ತು. ಅಂತಹ ಹೇಳಿಕೆಗಳಿಂದಲೇ ಪಕ್ಷವು ಸೋಲಿನ ಸುಳಿಗೆ ಸಿಲುಕಿತು. ಎಂದು ವಿಷಾದ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಸಂದೇಹಗಳಿಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಲು ಇಚ್ಛಿಸುವವರಿಗೆ ನಾನು 3 ದಿನಗಳ ಕಾಲ ಸಮಯಾವಕಾಶ ನೀಡುತ್ತೇನೆ. ಯಾರಾದರೂ ಚರ್ಚೆಗೆ ಬರಬಹುದು. ಆಗ ಅವರ ಎಲ್ಲಾ ಸಂದೇಹಗಳನ್ನು ಬಗೆಹರಿಸುತ್ತೇನೆ ಎಂದು ಸವಾಲು ಹಾಕಿದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 8 ಕ್ಷೇತ್ರಗಳಲ್ಲಿ ಮಾತ್ರ ವಿಜಯಿಯಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಕಂಡಿದೆ.
-
Union Home Minister Amit Shah at Times Now Summit: I will give time within 3 days to anyone who wants to discuss with me the issues related to the Citizenship Amendment Act https://t.co/n3fWCCYi7V
— ANI (@ANI) February 13, 2020 " class="align-text-top noRightClick twitterSection" data="
">Union Home Minister Amit Shah at Times Now Summit: I will give time within 3 days to anyone who wants to discuss with me the issues related to the Citizenship Amendment Act https://t.co/n3fWCCYi7V
— ANI (@ANI) February 13, 2020Union Home Minister Amit Shah at Times Now Summit: I will give time within 3 days to anyone who wants to discuss with me the issues related to the Citizenship Amendment Act https://t.co/n3fWCCYi7V
— ANI (@ANI) February 13, 2020