ETV Bharat / bharat

ಬಿಹಾರ ಚುನಾವಣೆ 2020: ಮೊದಲ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 100ಕ್ಕೂ ಹೆಚ್ಚು ಸ್ಥಾನಗಳನ್ನ ಪಡೆದಿತ್ತಾದರೂ ಮಿತ್ರ ಪಕ್ಷ ಜೆಡಿಯು ಹೆಚ್ಚು ಸ್ಥಾನ ಪಡೆದಿತ್ತು. ಆದರೆ, ಬಿಜೆಪಿಗೆ ಅತಿದೊಡ್ಡ ಪಕ್ಷ ಎಂಬ ಪಟ್ಟ ದೊರೆತಿರಲಿಲ್ಲ

The BJP is likely to emerge as the senior partner within the
ಬಿಹಾರ ಚುನಾವಣೆ 2020
author img

By

Published : Nov 10, 2020, 12:57 PM IST

ನವದೆಹಲಿ: ಬಿಹಾರದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಎನ್​ಡಿಎ ಮೈತ್ರಿಕೂಟದೊಳಗೆ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ಜೆಡಿಯುಗೆ ಹೋಲಿಸಿದರೆ ಬಿಜೆಪಿ ಪ್ರಸ್ತುತ 73 ಸ್ಥಾನಗಳ ಮುಂಚೂಣಿಯಲ್ಲಿದೆ. 243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಗೆ ಬಿಜೆಪಿ 120 ಸ್ಥಾನ, ಜೆಡಿಯು 122 ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡಿದ್ದವು. ಒಂದು ವೇಳೆ ಬಿಜೆಪಿ ಇದೇ ರೀತಿ ಮುನ್ನಡೆ ಸಾಧಿಸಿದರೆ, ಜೆಡಿಯುಗಿಂತ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.

ಇನ್ನು 2015 ರಲ್ಲಿ ಬಿಜೆಪಿ ಮತ್ತು ಜೆಡಿಯು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ಜಯಗಳಿಸಿತು. ಆಗ ಬಿಜೆಪಿಗೆ 50ಕ್ಕಿಂತ ಹೆಚ್ಚು ಸ್ಥಾನಗಳಷ್ಟೇ ಬಂದಿದ್ದವು. ಆದರೆ, 2010 ರ ಚುನಾವಣೆಯಲ್ಲಿ 101 ಸ್ಥಾನ ಪಡೆದಿತ್ತು. ಜೆಡಿಯು 110ಕ್ಕೂ ಹೆಚ್ಚು ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.