ETV Bharat / bharat

ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದ ಬಿಜೆಪಿ ನಾಯಕರು

author img

By

Published : Jan 22, 2021, 12:18 PM IST

ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಭತ್ತವನ್ನು ಕೂಡಲೇ ಸರ್ಕಾರ ಖರೀದಿಸಬೇಕೆಂದು ಒತ್ತಾಯಿಸಿ ಒಡಿಶಾದ ಸಂಬಲ್ಪುರದಲ್ಲಿ ಬಿಜೆಪಿ ನಾಯಕರು ಧರಣಿ ನಡೆಸಿದರು.

ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದ ಬಿಜೆಪಿ ನಾಯಕರು
BJP Leaders Spent Night At The Police Station

ಸಂಬಲ್ಪುರ (ಒಡಿಶಾ): ವಿವಿಧ ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಭತ್ತವನ್ನು ಕೂಡಲೇ ಸರ್ಕಾರ ಖರೀದಿಸಬೇಕೆಂದು ಒತ್ತಾಯಿಸಿ ಒಡಿಶಾದ ಪಶ್ಚಿಮ ಪಟ್ಟಣದಲ್ಲಿರುವ ಪೊಲೀಸ್​​ ಠಾಣೆ ಎದುರು ರಾತ್ರಿಯಿಡಿ ಬಿಜೆಪಿ ನಾಯಕರು ಧರಣಿ ನಡೆಸಿದರು.

ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದ ಬಿಜೆಪಿ ನಾಯಕರು

ಒಡಿಶಾ ಬಿಜೆಪಿಯ ಸಹ - ಉಸ್ತುವಾರಿ ಬಿಜಯ್ಪಾಲ್ ಸಿಂಗ್ ತೋಮರ್ ಮತ್ತು ರಾಜ್ಯ ಅಧ್ಯಕ್ಷ ಸಮೀರ್ ಮೊಹಾಂತಿ ಈ ಧರಣಿಯ ನೇತೃತ್ವ ವಹಿಸಿದ್ದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಪ್ರದೀಪ್ತಾ​​ ನಾಯಕ್, ಬಾರ್ಗಾರ್​​​​ ಸಂಸದ ಸುರೇಶ್ ಪೂಜಾರಿ ಮತ್ತು ಇತರರು ಸೇರಿದಂತೆ ಬಿಜೆಪಿ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.

ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ರೈತರು ದೀರ್ಘಕಾಲದವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಅದರಂತೆ ಬಿಜೆಡಿ ಆಡಳಿತದಲ್ಲೂ ರೈತರು ನರಳುತ್ತಲೆ ಇದ್ದಾರೆ. ಇದರಿಂದ ಅನ್ನದಾತ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸರ್ಕಾರದ ಅಸಮರ್ಥ ಆಡಳಿತದಿಂದಾಗಿ ರಾಜ್ಯಾದ್ಯಂತ ನೂರಾರು ಭತ್ತದ ಪ್ಯಾಕೆಟ್‌ಗಳು ಮಾರುಕಟ್ಟೆ ಅಂಗಳದಲ್ಲಿ ಬಿದ್ದಿವೆ. ಈ ಬಿಕ್ಕಟ್ಟು ಸಂಪೂರ್ಣವಾಗಿ ಮಾನವ ನಿರ್ಮಿತವಾಗಿದೆ ಎಂದು ಶ್ರೀ ಮೊಹಾಂತಿ ಆರೋಪಿಸಿದರು.

ಓದಿ: ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪ: ದೂರು ಹಿಂತೆಗೆದುಕೊಂಡ ಮಹಿಳೆ

ಸರ್ಕಾರವು ತನ್ನ ಟೋಕನ್ ವ್ಯವಸ್ಥೆಯನ್ನು ತಕ್ಷಣವೇ ತೆಗೆದು ಹಾಕಿ ಒಂದು ಎಕರೆ ನೀರಾವರಿ ರಹಿತ ಭೂಮಿಗೆ 13 ಕ್ವಿಂಟಾಲ್ ಭತ್ತ ಮತ್ತು ಒಂದು ಎಕರೆಗೆ 19 ಕ್ವಿಂಟಾಲ್ ನೀರಾವರಿ ಭೂಮಿಯನ್ನು ಖರೀದಿಸಬೇಕು. ವಿವಿಧ ಮಾರುಕಟ್ಟೆ ಪ್ರಾಂಗಣಗಳಲ್ಲಿ ಸಂಗ್ರಹಿಸಿಟ್ಟಿರುವ ಭತ್ತವನ್ನು ಖರೀದಿ ಮಾಡುವ ನಿರ್ಧಾರವನ್ನು ಕೈಗೊಳ್ಳುವವರೆಗೂ ನಾವು ಸಂಬಲ್ಪುರವನ್ನು ಬಿಡುವುದಿಲ್ಲ ಎಂದು ಬಾರ್ಗಾರ್​​​ ಸಂಸದ ಸುರೇಶ್​ ಪೂಜಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.