ಶ್ರೀನಗರ: ಕಣಿವೆ ನಾಡಿನಲ್ಲಿ ಉಗ್ರರ ಅಟ್ಟಹಾಸಕ್ಕೆ ಬಿಜೆಪಿ ಸ್ಥಳೀಯ ಮುಖಂಡ, ಸಹೋದರ ಹಾಗೂ ತಂದೆ ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಬಂಡಿಪೊರ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ವಾಸೀಂ ಅಹ್ಮದ್ ಬಾರಿ ಬಂಡಿಪೊರದಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ನಿನ್ನೆ ರಾತ್ರಿ 9 ಗಂಟೆಗೆ ತನ್ನ ಸಹೋದರ ಹಾಗೂ ತಂದೆ ಜತೆ ಅಂಗಡಿಯಲ್ಲಿದ್ದ ವೇಳೆ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಇವರನ್ನ ಹತ್ಯೆ ಮಾಡಿದ್ದಾರೆ. ಇದರ ಪಕ್ಕದಲ್ಲೇ ಪೊಲೀಸ್ ಠಾಣೆ ಇದೆ.
-
Shocked and saddened by d killing of young BJP leader Wasim Bari and his brother by terrorists in Bandipora. Bari’s father who is also a senior leader was injured. This despite 8 security commandos. Condolences to d family. pic.twitter.com/hAKnOudaxj
— Ram Madhav (@rammadhavbjp) July 8, 2020 " class="align-text-top noRightClick twitterSection" data="
">Shocked and saddened by d killing of young BJP leader Wasim Bari and his brother by terrorists in Bandipora. Bari’s father who is also a senior leader was injured. This despite 8 security commandos. Condolences to d family. pic.twitter.com/hAKnOudaxj
— Ram Madhav (@rammadhavbjp) July 8, 2020Shocked and saddened by d killing of young BJP leader Wasim Bari and his brother by terrorists in Bandipora. Bari’s father who is also a senior leader was injured. This despite 8 security commandos. Condolences to d family. pic.twitter.com/hAKnOudaxj
— Ram Madhav (@rammadhavbjp) July 8, 2020
ಗಂಭೀರವಾಗಿ ಗಾಯಗೊಂಡಿದ್ದ ವಾಸೀಂ ಸಹೋದರ ಹಾಗೂ ತಂದೆಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತನಿಖೆ ಆರಂಭಿಸಿದ್ದಾರೆ.
ಮೃತ ವಾಸೀಂ ಮತ್ತು ಅವರ ಕುಟುಂಬಕ್ಕೆ ಎಂಟು ಮಂದಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಯಾರೊಬ್ಬ ಸಿಬ್ಬಂದಿ ಇಲ್ಲದಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ವಾಸೀಂ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡ ರಾಮಮಾದವ್ ಟ್ವೀಟ್ ಮಾಡಿ ಖಂಡಿಸಿದ್ದು, ಘಟನೆ ಕೇಳಿ ಶಾಕ್ ಆಗಿದೆ ಎಂದಿದ್ದಾರೆ.