ಅಮರಾವತಿ (ಆಂಧ್ರ ಪ್ರದೇಶ): ಬಿಜೆಪಿ ರಾಜ್ಯಾಧ್ಯಕ್ಷ ಕಣ್ಣ ಲಕ್ಷ್ಮೀನಾರಾಯಣ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ.ವಿಜಯ ಸಾಯಿ ರೆಡ್ಡಿ ಆರೋಪಿಸಿದ್ದಾರೆ.
ಸಾಯಿ ರೆಡ್ಡಿಯ ಈ ಹೇಳಿಕೆಯ ಬಳಿಕ ಬಿಜೆಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಡುವೆ ಟ್ವೀಟ್ ವಾರ್ ಪ್ರಾರಂಭವಾಗಿದ್ದು, ಸಾಯಿರೆಡ್ಡಿ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ ಆಂಧ್ರ ಪ್ರದೇಶ ಘಟಕ, ವಿಜಯ ಸಾಯಿ ರೆಡ್ಡಿ ನಿಮ್ಮನ್ನು ಆಂಧ್ರದ ಜನತೆ ಭ್ರಷ್ಟ ಮತ್ತು ಜೈಲು ಹಕ್ಕಿ ಎಂದು ಪರಿಗಣಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನೀವು ಮಾಡಿರುವ ಆರೋಪ ತುಂಬಾ ಹೀನಾಯವಾಗಿದೆ ಮತ್ತು ಮೂರ್ಖತನದಿಂದ ಕೂಡಿದೆ. ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ಎರಡು ಮುಖದ ಬಗ್ಗೆ ತಿಳಿದಿದ್ದಾರೆ. ಆದ್ದರಿಂದ, ನೀವು ನಿಮ್ಮ ಮಿತಿಯಲ್ಲಿರಿ ಎಂದು ಹೇಳಿದೆ.
-
@VSReddy_MP,Ppl of AP recognize you as a corrupt jailbird and broker in Delhi.
— BJP ANDHRA PRADESH (@BJP4Andhra) April 19, 2020 " class="align-text-top noRightClick twitterSection" data="
True to your character, your allegations against @klnbjp are just cheap and idiotic blabber.@PMOIndia and @HMOIndia are aware of your wily, double-faced character.
We warn you to stay in your limits pic.twitter.com/SeBh9NV7kR
">@VSReddy_MP,Ppl of AP recognize you as a corrupt jailbird and broker in Delhi.
— BJP ANDHRA PRADESH (@BJP4Andhra) April 19, 2020
True to your character, your allegations against @klnbjp are just cheap and idiotic blabber.@PMOIndia and @HMOIndia are aware of your wily, double-faced character.
We warn you to stay in your limits pic.twitter.com/SeBh9NV7kR@VSReddy_MP,Ppl of AP recognize you as a corrupt jailbird and broker in Delhi.
— BJP ANDHRA PRADESH (@BJP4Andhra) April 19, 2020
True to your character, your allegations against @klnbjp are just cheap and idiotic blabber.@PMOIndia and @HMOIndia are aware of your wily, double-faced character.
We warn you to stay in your limits pic.twitter.com/SeBh9NV7kR
ಇನ್ನು ತಮ್ಮ ಮೇಲಿನ ಆರೋಪದ ಬಗ್ಗೆ ಕಣ್ಣ ಲಕ್ಷೀನಾರಾಯಣ ಕೂಡ ಪ್ರತಿಕ್ರಿಯಿಸಿದ್ದು, ಟಿಡಿಪಿ ಮತ್ತು ವೈಎಸ್ ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ರಾಜ್ಯವನ್ನು ದೋಚುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ, ತನ್ನ ಮೇಲೆ ಆರೋಪ ಮಾಡಿದ ವಿಜಯ ಸಾಯಿ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದಾರೆ.