ETV Bharat / bharat

ಮೋದಿ ಬಂದ್ರೆ 28ಕ್ಕೆ 28...! ಕರ್ನಾಟಕದಿಂದ ಪ್ರಧಾನಿ ಸ್ಪರ್ಧೆಗೆ ಹೆಚ್ಚಿದ ಬೇಡಿಕೆ

ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಲು ಕರ್ನಾಟಕದಲ್ಲಿ ಮಾತ್ರ ಉತ್ತಮ ಅವಕಾಶ ಹೊಂದಿದ್ದು, ಮೋದಿ ಸ್ಪರ್ಧೆ ಸಹಜವಾಗಿ ಹಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಇದು ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಮತ.

author img

By

Published : Mar 24, 2019, 7:30 PM IST

Updated : Mar 24, 2019, 7:38 PM IST

ಮೋದಿ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದ್ದು ಕರ್ನಾಟಕದ ಕೆಲ ಕ್ಷೇತ್ರಗಳು ಅಭ್ಯರ್ಥಿಗಳಿಂದ ರಂಗೇರಿದೆ.

ಒಂದೆಡೆ ಮಂಡ್ಯ ಕ್ಷೇತ್ರ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಕಣ ಕುತೂಹಲ ಕೆರಳಿಸಿದ್ದು ಮತ್ತೊಂದೆಡೆ ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿದೆ.

#ನೀವ್_ಬಂದ್ರೆ_28ಕ್ಕೆ 28

ನೀವ್​​ ಬಂದ್ರೆ 28ಕ್ಕೆ 28 ಅನ್ನೋದು ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿದೆ. ಕರ್ನಾಟಕದಲ್ಲಿ ಒಟ್ಟಾರೆ 28 ಲೋಕಸಭಾ ಕ್ಷೇತ್ರಗಳಿದ್ದು ಒಂದು ವೇಳೆ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ನಡೆಸಿದರೆ ಕರ್ನಾಟಕದ ಅಷ್ಟೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಂದು ಭಾಜಪಾ ಬೆಂಬಲಿಗರು ಟ್ವಿಟರ್​​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಲು ಕರ್ನಾಟಕದಲ್ಲಿ ಮಾತ್ರ ಉತ್ತಮ ಅವಕಾಶ ಹೊಂದಿದ್ದು, ಮೋದಿ ಸ್ಪರ್ಧೆ ಸಹಜವಾಗಿ ಹಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಇದು ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಮತ.

ಕಳೆದ ಬಾರಿ ಮೋದಿ ವಾರಣಾಸಿ ಹಾಗೂ ವಡೋದರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದರು. ಈ ಬಾರಿ ಮೋದಿ ಸ್ಪರ್ಧೆ ವಾರಣಾಸಿಯಿಂದ ಖಚಿತವಾಗಿದ್ದು ಇನ್ನೊಂದು ಕ್ಷೇತ್ರ ಅಂತಿಮವಾಗಿಲ್ಲ.

ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ಪ್ರಭಾವ ತುಂಬಾನೇ ಕಡಿಮೆ. ಕೇರಳದಲ್ಲಿ ಎಡರಂಗಗಳು ಹಾಗೂ ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷಗಳು ಪ್ರಾಬಲ್ಯ ಹೊಂದಿವೆ. ಹೀಗಾಗಿ ಕರ್ನಾಟಕ ಮಾತ್ರವೇ ಬಿಜೆಪಿಯ ಏಕೈಕ ಆಯ್ಕೆ.

Raga
ರಾಹುಲ್ ಗಾಂಧಿ

ಅತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕೇರಳದ ವಯನಾಡ್​ನಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಇಬ್ಬರೂ ನಾಯಕರು ದಕ್ಷಿಣದಲ್ಲಿ ಸ್ಪರ್ಧೆ ನಡೆಸಿದ್ದೇ ಆದಲ್ಲಿ ದಕ್ಷಿಣದ ರಾಜ್ಯದಲ್ಲಿ ಚುನಾವಣಾ ಕಣ ಮತ್ತಷ್ಟು ಕುತೂಹಲ ಮೂಡಿಸೋದು ಗ್ಯಾರಂಟಿ..!

Last Updated : Mar 24, 2019, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.