ETV Bharat / state

ಹುಬ್ಬಳ್ಳಿ: ಊಟ ಮಾಡುತ್ತಿರುವಾಗ ಮಳೆಗೆ ಕುಸಿದ ಮನೆ ಗೋಡೆ: ಮಗು ಸೇರಿದಂತೆ ‌ಐವರು ಪ್ರಾಣಪಾಯದಿಂದ ಪಾರು - HOUSE WALL COLLAPSED

ಹುಬ್ಬಳ್ಳಿ-ಧಾರವಾಡದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಕೊಟಗೊಂಡಹುಣಸಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ.

ಕುಸಿದ ಮನೆ ಗೋಡೆ
ಕುಸಿದ ಮನೆ ಗೋಡೆ (ETV Bharat)
author img

By ETV Bharat Karnataka Team

Published : Oct 12, 2024, 2:04 PM IST

ಹುಬ್ಬಳ್ಳಿ: ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್​ ಸಣ್ಣ ಮಗು ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ಎಂದಿನಂತೆ ಮನೆ ಮಾಲೀಕ ರಾಜೇಸಾಬ ಮತ್ತಿಗಟ್ಟಿ ಮತ್ತು ಕುಟುಂಬ ಸದಸ್ಯರು ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದ ಸಂದರ್ಭದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಗೋಡೆ ಮಳೆಯಿಂದ ನೆನೆದು ಕುಸಿದು ಬಿದ್ದಿದೆ. ಊಟ ಮಾಡುತ್ತಿದ್ದ ರಾಜೇಸಾಬ ಮತ್ತಿಗಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಮನೆಯಲ್ಲಿದ್ದ ಸಣ್ಣಮಗು ಸೇರಿದಂತೆ ನಾಲ್ವರು ಪಾರಾಗಿದ್ದಾರೆ.

ಮಳೆಗೆ ಕುಸಿದ ಮನೆ ಗೋಡೆ (ETV Bharat)

ಮನೆಯ ಗೋಡೆ ಕುಸಿದಿದ್ದರಿಂದ ರಾಜೇಸಾಬ ಕುಟುಂಬ ರಾತ್ರಿಯಿಡಿ ದೇವರ ಗುಡಿಯಲ್ಲಿ ಆಶ್ರಯ ಪಡೆದುಕೊಂಡಿದೆ. ಇದ್ದ ಒಂದು ಆಸರೆಗೂಡು ಮಳೆಗೆ ನಾಶವಾಗಿದ್ದು ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಭಾರಿ ಮಳೆಗೆ ರೈಲ್ವೆ ಕೆಳಸೇತುವೆಯಲ್ಲಿ ಮುಳುಗಿದ ಟ್ರ್ಯಾಕ್ಟರ್‌: 10 ಜನರ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.