ಝಾನ್ಸಿ (ಉತ್ತರ ಪ್ರದೇಶ): ಝಾನ್ಸಿಯ ಪಟಾಕಿ ಕಾರ್ಖಾನೆಯ ಸ್ಫೋಟ ದುರಂತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮೂವರು ಮೃತಪಟ್ಟಿದ್ದಾರೆ.
ಅಕ್ಟೋಬರ್ 1ರಂದು ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ನಾಲ್ವರು ಗಂಭೀರ ಸ್ಥಿತಿಯಲ್ಲಿ ಲಕ್ನೋ ಕೆಜಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಚಿಕಿತ್ಸೆ ಫಲಿಸದೇ ಕಾರ್ಖಾನೆಯ ನಿರ್ವಾಹಕನ ಪತ್ನಿ ಸೇರಿದಂತೆ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಕಳೆದ 10 ದಿನಗಳಿಂದ ಅವರಿಗೆ ಇದೇ ಕೆಜಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 11 ದಿನಗಳ ಬಳಿಕ ಮೂವರು ಕೊನೆಯುಸಿರೆಳೆದಿದ್ದಾರೆ.
![Jhansi Firecracker Factory Blast After 11 Days 3 Women Die in Lucknow KGMC Factory Owner is in Jail](https://etvbharatimages.akamaized.net/etvbharat/prod-images/12-10-2024/up-jh-02-facrory-dhamaka-teen-ki-maut-10138_12102024115812_1210f_1728714492_882.jpg)
ಮೃತದೇಹಗಳನ್ನು ಆಯಾ ಸಂಬಂಧಿಕರಿಗೆ ನೀಡಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಈ ಪ್ರದೇಶದಲ್ಲಿ ನಡೆಸುತ್ತಿರುವ ಪಟಾಕಿ ಕಾರ್ಖಾನೆಯ ಪರವಾನಗಿ ರದ್ದುಪಡಿಸುವಂತೆ ಕತ್ರಾ ಎಂಬ ಬಜಾರ್‌ನಲ್ಲಿ ಮೃತದೇಹಗಳನ್ನಿಟ್ಟು ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ದೇಹತ್ ಗೋಪಿನಾಥ್ ಸೋನಿ, ಸ್ಥಳೀಯ ಶಾಸಕ ಜವಾಹರಲಾಲ್ ರಜಪೂತ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಕುಟುಂಬಸ್ಥರು ಅವರ ಮಾತಿಗೆ ಕಿವಿಗೊಡಲಿಲ್ಲ. ಸುಮಾರು 4 ಗಂಟೆಗಳ ಕಾಲ ನಡೆದ ಪ್ರತಿಭಟನೆ ನಂತರ ಹೇಗೋ ಅಧಿಕಾರಿಗಳು ಅಂತ್ಯಗೊಳಿಸಿದರು.
![Jhansi Firecracker Factory Blast After 11 Days 3 Women Die in Lucknow KGMC Factory Owner is in Jail](https://etvbharatimages.akamaized.net/etvbharat/prod-images/12-10-2024/up-jh-02-facrory-dhamaka-teen-ki-maut-10138_12102024115812_1210f_1728714492_675.jpg)
ಕಾರ್ಖಾನೆಯ ನಿರ್ವಾಹಕನ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ. ಮೃತ ಮಹಿಳೆಯರ ಅಂತಿಮ ಸಂಸ್ಕಾರವನ್ನು ನಡೆಸಲಾಗಿದೆ ಎಂದು ಎಸ್‌ಪಿ ಸುಧಾ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 7 ಕಾರ್ಮಿಕರು ಸಾವು, ಹಲವರಿಗೆ ಗಾಯ - Coal Mine Blast