ತೂತುಕುಡಿ: ಬಿಜೆಪಿಯವರು ಐಟಿ ದಾಳಿ ನಡೆಸಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವನ್ನು ತಡೆಯಲಾಗದು ಎಂದು ಡಿಎಂಕೆ ನಾಯಕಿ ಕನ್ನಿಮೊಳಿ ಕಿಡಿಕಾರಿದ್ದಾರೆ.
-
BJP cannot stop me from winning, says Kanimozhi after I-T raid
— ANI Digital (@ani_digital) April 16, 2019 " class="align-text-top noRightClick twitterSection" data="
Read @ANI | https://t.co/QiYKksYh7M pic.twitter.com/M2wHackPo2
">BJP cannot stop me from winning, says Kanimozhi after I-T raid
— ANI Digital (@ani_digital) April 16, 2019
Read @ANI | https://t.co/QiYKksYh7M pic.twitter.com/M2wHackPo2BJP cannot stop me from winning, says Kanimozhi after I-T raid
— ANI Digital (@ani_digital) April 16, 2019
Read @ANI | https://t.co/QiYKksYh7M pic.twitter.com/M2wHackPo2
ತಮ್ಮ ನಿವಾಸದ ಮೇಲೆ ನಡೆದ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ನಿಮೊಳಿ, ಐಟಿ ದಾಳಿಯು ಪ್ರಜಾಪ್ರಭುತ್ವದ ವಿರೋಧಿ, ಉದ್ದೇಶಪೂರ್ವಕ ಪ್ಲಾನ್ ಆಗಿದೆ. ಹೀಗೆ ಬಿಜೆಪಿಯು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆಸಿ ತಮ್ಮನ್ನು ಸೋಲಿಸಲಾಗದು. ಈ ರೀತಿ ಐಟಿ ದಾಳಿ ನಡೆಸಿ ಹೆದರಿಸಲು ಯತ್ನಿಸಲಾಗುತ್ತಿದೆ. ತೂತುಕುಡಿಯಲ್ಲಿ ಚುನಾವಣೆ ನಿಲ್ಲಿಸಲು ಹೀಗೆ ಮಾಡಲಾಗುತ್ತಿದೆ. ಆದರೆ ಡಿಎಂಕೆ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಐಟಿ ಇಲಾಖೆ ಅಧಿಕಾರಿಗಳು ಕನ್ನಿಮೊಳಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ಐಟಿ ದಾಳಿ ವೇಳೆ ಕನ್ನಿಮೊಳಿ ತಮ್ಮ ನಿವಾಸದಲ್ಲೇ ಇದ್ದು, ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ.