ETV Bharat / bharat

ನಾಲ್ಕು ರಾಜ್ಯ ಚುನಾವಣೆ; ಬಿಜೆಪಿಯಿಂದ ಚುನಾವಣಾ ಮೇಲುಸ್ತುವಾರಿಗಳ ನೇಮಕ

ನರೇಂದ್ರ ಸಿಂಗ್​ ತೋಮರ್​, ಜಿ ಕೃಷ್ಣನ್​ ರೆಡ್ಡಿ, ಪ್ರಹ್ಲಾದ್​ ಜೋಶಿ, ಅರ್ಜುನ್​ ರಾಮ್​ ಮೇಘ್ವಾಲ್​ ಕ್ರಮವಾಗಿ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಿಗೆ ಚುನಾವಣಾ ಮೇಲುಸ್ತುವಾರಿಗಳಾಗಿ ನೇಮಕಗೊಂಡಿದ್ದಾರೆ.

BJP appoints poll in-charges for four poll-bound states
ಬಿಜೆಪಿಯಿಂದ ಚುನಾವಣಾ ಮೇಲುಸ್ತುವಾರಿಗಳ ನೇಮಕ
author img

By

Published : Feb 3, 2021, 7:55 AM IST

ನವದೆಹಲಿ: ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಚುನಾವಣಾ ಇನ್​ಚಾರ್ಜ್​ಗಳನ್ನು ನೇಮಿಸಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಅಸ್ಸಾಂಗೆ ಕ್ರಮವಾಗಿ ಚುನಾವಣಾ ಉಸ್ತುವಾರಿ ಮತ್ತು ಸಹ-ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಗೃಹಇಲಾಖೆ ರಾಜ್ಯ ಖಾತೆ ಸಚಿವ ಜಿ. ಕಿಶನ್ ರೆಡ್ಡಿಗೆ ತಮಿಳುನಾಡಿನ ಚುನಾವಣಾ ಉಸ್ತುವಾರಿ ವಹಿಸಿದ್ದರೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ ಕೆ ಸಿಂಗ್ ಅವರನ್ನು ಸಹ-ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ್​ ಅವರಿಗೆ ಕೇರಳ ಚುನಾವಣೆಯ ಉಸ್ತುವಾರಿ ಮತ್ತು ಸಹ-ಉಸ್ತುವಾರಿ ಹೊಣೆ ವಹಿಸಲಾಗಿದೆ. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರನ್ನು ಪುದುಚೇರಿಯ ಚುನಾವಣಾ ಉಸ್ತುವಾರಿ ಮತ್ತು ಪಕ್ಷದ ವಕ್ತಾರ ರಾಜೀವ್ ಚಂದ್ರಶೇಖರ್ ಅವರನ್ನು ಸಹ-ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.