ವಾರಂಗಲ್(ತೆಲಂಗಾಣ): ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪ್ರತಿಕೃತಿ ದಹನ ಮಾಡಲು ಮುಂದಾದಾಗ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಬೆಂಕಿ ತಗುಲಿರುವ ಘಟನೆ ಇಲ್ಲಿನ ವಾರಂಗಲ್ನಲ್ಲಿ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ 9 ತಿಂಗಳ ಪುಟ್ಟ ಹಸುಳೆಯನ್ನ ಕಿಡ್ನಾಪ್ ಮಾಡಿ ಅದರ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ್ದನು. ಘಟನೆಯಿಂದ ಮಗು ಸಾವನ್ನಪ್ಪಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಮುಕನಿಗೆ ಕಠಿಣ ಶಿಕ್ಷೆ ಒದಗಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸಿಎಂ ಪ್ರತಿಕೃತಿ ದಹನ ಮಾಡಲು ಮುಂದಾಗಿದ್ದು, ಸೀಮೆಎಣ್ಣೆ ಸುರಿದು ಪ್ರತಿಕೃತಿಗೆ ಬೆಂಕಿ ಹಚ್ಚಿದ ವೇಳೆ ನಾಲ್ವರು ಕಾರ್ಯಕರ್ತರಿಗೆ ತಗುಲಿದೆ.
ಘಟನೆಯಲ್ಲಿ ಪಕ್ಷದ ಕಾರ್ಯಕರ್ತರಾದ ಶ್ರೀನಿವಾಸ(ಯುವ ಮೋರ್ಚ), ರಾವ್ ಪದ್ಮಾ ಸೇರಿದಂತೆ ನಾಲ್ವರಿಗೆ ಬೆಂಕಿ ತಲುಗಿದೆ. ತಕ್ಷಣ ಸ್ಥಳದಲ್ಲಿದ್ದ ಕಾರ್ಯಕರ್ತರು ಬೆಂಕಿ ನಂದಿಸಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ. ಘಟನೆಯಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿಗೆ ಹೆಚ್ಚಿನ ಗಾಯವಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.