ETV Bharat / bharat

ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್​ಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತರು - undefined

ಬಿಹಾರದ ಪಕ್ಷದ ಕಚೇರಿ ಸಡಕತ್​ ಆಶ್ರಮದಲ್ಲಿ ಸೇರಿದ್ದ ಯುವ ಕಾಂಗ್ರೆಸ್​ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಕ್ತದಲ್ಲಿ ರಾಹುಲ್​ರಿಗೆ ಪತ್ರ ಬರೆದರು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ತಮ್ಮ ನಿರ್ಧಾರವನ್ನು ಮತ್ತೆ ಪರಿಶೀಲಿಸುವಂತೆ ಈ ಮೂಲಕ ಮನವಿ ಮಾಡಿದರು.

ರಾಹುಲ್ ಗಾಂಧಿ
author img

By

Published : Jun 27, 2019, 9:01 PM IST

ಪಾಟ್ನಾ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್ ಗಾಂಧಿ ಅಚಲ ನಿರ್ಧಾರ ಸಡಿಲಿಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಬಿಹಾರದ ಯುವ ಕಾಂಗ್ರೆಸ್​ ಘಟಕ ರಕ್ತದಲ್ಲಿ ಪತ್ರ ಬರೆದು, ರಾಹುಲ್ ನಿರ್ಧಾರ ಬದಲಿಸುವಂತೆ ಮನವಿ ಮಾಡಿದೆ.

ಪಕ್ಷದ ಕಚೇರಿ ಸಡಕತ್​ ಆಶ್ರಮದಲ್ಲಿ ಸೇರಿದ್ದ ಯುವ ಕಾಂಗ್ರೆಸ್​ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಕ್ತದಲ್ಲಿ ರಾಹುಲ್​ರಿಗೆ ಪತ್ರ ಬರೆದರು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ತಮ್ಮ ನಿರ್ಧಾರವನ್ನು ಮತ್ತೆ ಪರಿಶೀಲಿಸುವಂತೆ ಈ ಮೂಲಕ ಮನವಿ ಮಾಡಿದರು.

ರಕ್ತದಲ್ಲಿ ಬರೆದ ಪತ್ರವನ್ನು ರಾಜ್ಯದ ಕಾಂಗ್ರೆಸ್​ ಮುಖ್ಯಸ್ಥ ಡಾ. ಮದನ್​ ಮೋಹನ್ ಝಾ ಅವರಿಗೆ ಒಪ್ಪಿಸಿದ ಕಾರ್ಯಕರ್ತರು, ತಮ್ಮ ಕೋರಿಕೆಯನ್ನು ರಾಹುಲ್​ರಿಗೆ ಮುಟ್ಟಿಸುವಂತೆ ತಿಳಿಸಿದರು.

ಇತ್ತೀಚೆಗೆ ಕೇಶವ್ ಚಂದ್ ಯಾದವ್ ನೇತೃತ್ವದಲ್ಲಿ ದೇಶದೆಲ್ಲೆಡೆಯಿಂದ ಯುವ ಕಾಂಗ್ರೆಸಿಗರು ದೆಹಲಿಗೆ ಆಗಮಿಸಿ, ರಾಹುಲ್ ಮನವೊಲಿಸಲು ಯತ್ನಿಸಿದ್ದರು. ಸತ್ಯ, ನ್ಯಾಯ, ಒಕ್ಕೂಟ ಹಾಗೂ ಪ್ರೀತಿಯ ಪ್ರತಿಪಾದಕ ರಾಹುಲ್ ಕಾಂಗ್ರೆಸ್​ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಈ ವೇಳೆ ಮನವಿ ಮಾಡಿದ್ದರು. 12 ಕೋಟಿಗೂ ಹೆಚ್ಚು ಮಂದಿ ರಾಹುಲ್ ಪರವಾಗಿಯೇ ಇದ್ದಾರೆ ಎಂದು ಯುವ ಕಾಂಗ್ರೆಸ್​ ಉಪಾಧ್ಯಕ್ಷ ಬಿ.ವಿ. ಶ್ರೀನಿವಾಸ್​ ಹೇಳಿದ್ದರು.

ಕಾಂಗ್ರೆಸ್​ನ ಹಿರಿಯ ನಾಯಕರು ಸಹ ರಾಹುಲ್​ರಿಗೆ ರಾಜೀನಾಮೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ರಾಹುಲ್ ಮುಂದಿನ ನಿರ್ಧಾರ ಇನ್ನೂ ಗೌಣವಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.