ETV Bharat / bharat

ಬಿಹಾರ ಅಭಿವೃದ್ಧಿ ವೇಗ ಪಡೆದುಕೊಳ್ಳಲು ಎನ್​ಡಿಎ ಮೈತ್ರಿ ಬೆಂಬಲಿಸಿ: ಮೋದಿ - ಬಿಹಾರ ವಿಧಾನಸಭಾ ಫೈಟ್​ ನಮೋ

ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಭೇಟೆ ಭರ್ಜರಿಯಾಗಿ ಆರಂಭಗೊಂಡಿದ್ದು, ಒಂದೇ ದಿನ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು.

modi in Bihar
modi in Bihar
author img

By

Published : Oct 23, 2020, 5:05 PM IST

ಭಾಗಲ್ಪುರ್​(ಬಿಹಾರ): ಬಿಹಾರದಲ್ಲಿ ಚುನಾವಣಾ ಅಖಾಡಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ, ಭಾಗಲ್ಪುರ್​​ದಲ್ಲಿ ಮೂರನೇ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಬಿಹಾರದ ಜನರು ನಿತೀಶ್​ ಕುಮಾರ್​​ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಬೆಳಗ್ಗೆ ಸಸರಾಮ್​ ಹಾಗೂ ಗಯಾದಲ್ಲಿ ಪ್ರಚಾರ ಸಭೆ ನಡೆಸಿದ ಬಳಿಕ ಭಾಗಲ್ಫುರ್​ದಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿತೀಶ್​ ಕುಮಾರ್​ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು(ಎನ್​ಡಿಎ) ರಾಜ್ಯದಲ್ಲಿ ಮರು ಆಯ್ಕೆ ಮಾಡಲು ಬಿಹಾರದ ಜನರು ನಿರ್ಧರಿಸಿದ್ದಾರೆ ಎಂದರು.

ಬಿಹಾರದಲ್ಲಿ ನಮೋ ಭಾಷಣ

ಇದು ಇಂದು ನನ್ನ ಮೂರನೇ ರ‍್ಯಾಲಿ. ಬಿಹಾರ ಜನರ ಆದೇಶವು ನಿತೀಶ್​ ಕುಮಾರ್​ಜೀ ಅವರ ನೇತೃತ್ವದ ಎನ್​ಡಿಎ ಸರ್ಕಾರದೊಂದಿಗೆ ಸ್ಪಷ್ಟವಾಗಿದೆ. ನಾನು ಹೋದಲ್ಲೆಲ್ಲಾ ಬಿಹಾರ ಜನರು ನಿತೀಶ್​ಜೀ ಅವರನ್ನು ಮರು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಬಿಹಾರದ ಅಭಿವೃದ್ಧಿ ವೇಗ ಮತ್ತಷ್ಟು ಹೆಚ್ಚಾಗಲು ಎನ್​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್​​ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ನಮೋ, ತಮ್ಮ ಸ್ವಂತ ಬೊಕ್ಕಸ ಭರ್ತಿ ಮಾಡಿಕೊಳ್ಳಲು ರಾಜ್ಯವನ್ನು ಲೂಟಿ ಮಾಡ್ತಿದ್ದು, ಬೇರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿರುವ ಆರ್​ಜೆಡಿ ಕೇವಲ ಅಪರಾಧ ಪ್ರಕರಣಗಳನ್ನು ಹೆಚ್ಚಿಸಿ ಗೂಂಡಾ ರಾಜ್ಯ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಎಂದರು.

ಆರ್​ಜೆಡಿ- ಕಾಂಗ್ರೆಸ್​ ಸಮಾಜದ ಹಿಂದುಳಿದ ವರ್ಗಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಿಲ್ಲ.ಬಿಹಾರ ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕೆ ಅರ್ಹವಾಗಿದೆ ಎಂದು ತಿಳಿಸಿದರು.

ಬಿಹಾರದ 243 ಕ್ಷೇತ್ರಗಳಿಗೆ ಅಕ್ಟೋಬರ್​ 28, ನವೆಂಬರ್​ 3 ಮತ್ತು 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮತ ಎಣಿಕೆ ನವೆಂಬರ್​ 10ರಂದು ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.