ETV Bharat / bharat

ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ಸೈಕಲ್​ ತುಳಿದ 15ರ ಬಾಲಕಿ: ಇವಾಂಕಾ ಟ್ರಂಪ್​​ ಮೆಚ್ಚುಗೆ - ಇವಾಂಕಾ ಟ್ರಂಪ್ ಲೇಟೆಸ್ಟ್ ನ್ಯೂಸ್

ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹರಿಯಾಣದ ಗುರುಗ್ರಾಮ್​ನಿಂದ ಬಿಹಾರದ ದರ್ಬಂಗಾಗೆ 1,200 ಕಿ.ಮೀ. ಪ್ರಯಾಣಿಸಿದ್ದ ಬಾಲಕಿಯ ಸಾಧನೆ ಮೆಚ್ಚಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಟ್ವೀಟ್ ಮಾಡಿದ್ದಾರೆ.

ihar girl cycling 1,200 km with father
15ರ ಬಾಲಕಿಗೆ ಇವಾಂಕಾ ಟ್ರಂಪ್ ಮೆಚ್ಚುಗೆ
author img

By

Published : May 23, 2020, 9:58 AM IST

Updated : May 23, 2020, 6:05 PM IST

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ 15 ವರ್ಷದ ಬಾಲಕಿ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹರಿಯಾಣದ ಗುರುಗ್ರಾಮ್​ನಿಂದ ಬಿಹಾರದ ದರ್ಬಂಗಾಗೆ 1,200 ಕಿ.ಮೀ. ಪ್ರಯಾಣಿಸಿದ್ದಾಳೆ. ಬಾಲಕಿಯ ಈ ಕಾರ್ಯ ಮೆಚ್ಚಿ ಇವಾಂಕಾ ಟ್ರಂಪ್ ಟ್ವೀಟ್​ ಮಾಡಿದ್ದಾರೆ.

  • 15 yr old Jyoti Kumari, carried her wounded father to their home village on the back of her bicycle covering +1,200 km over 7 days.

    This beautiful feat of endurance & love has captured the imagination of the Indian people and the cycling federation!🇮🇳 https://t.co/uOgXkHzBPz

    — Ivanka Trump (@IvankaTrump) May 22, 2020 " class="align-text-top noRightClick twitterSection" data=" ">

15 ವರ್ಷ ವಯಸ್ಸಿನ ಜ್ಯೋತಿ ಕುಮಾರಿ, ಗಾಯಗೊಂಡ ತಂದೆಯನ್ನು 7 ದಿನಗಳಲ್ಲಿ 1,200 ಕಿ.ಮೀ. ದೂರವಿರುವ ತಮ್ಮ ಊರಿಗೆ ಸೈಕಲ್ ಮೂಲಕ ಕರೆದೊಯ್ದಿದ್ದಾಳೆ. ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರವಾದ ಸಾಧನೆಯು ಭಾರತೀಯ ಜನರ ಮತ್ತು ಸೈಕ್ಲಿಂಗ್ ಒಕ್ಕೂಟದ ಕಲ್ಪನೆಯನ್ನು ಸೆರೆ ಹಿಡಿದಿದೆ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ.

ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ಸೈಕಲ್​ ತುಳಿದ 15ರ ಬಾಲಕಿ

ಇತ್ತ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಬಾಲಕಿಯ ಸಾಧನೆಯನ್ನು ಮೆಚ್ಚಿಕೊಂಡಿದ್ದು, ಪರೀಕ್ಷೆಗೆ ಕರೆದಿದೆ. ಈ ಬಗ್ಗೆ ಈಟಿವಿ ಭಾರತ ಜೊತೆ ಬಾಲಕಿ ಸಂತಸ ವ್ಯಕ್ತಪಡಿಸಿದ್ದು, ಮುಂದಿನ ವಾರ ನವದೆಹಲಿಗೆ ತೆರಳಲಿದ್ದೇನೆ ಎಂದಿದ್ದಾಳೆ.

ತಂದೆ ಮತ್ತು ಮಗಳು ಹರಿಯಾಣದಲ್ಲಿರುವಾಗ ಲಾಕ್​ಡೌನ್ ಘೋಷಣೆಯಾದ ಪರಿಣಾಮ ಅವರನ್ನು ಕೆಲಸದಿಂದ ತೆಗೆದ ಮಾಲೀಕ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾನೆ. ಈ ವೇಳೆ ಅವರ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ದಿನಸಿ ತೆಗೆದುಕೊಳ್ಳುವ ತಂದೆಯ ಸಲಹೆ ತಿರಸ್ಕರಿಸಿದ ಪುತ್ರಿ ಒಂದು ಸೈಕಲ್ ತೆಗೆದುಕೊಂಡು ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ಪ್ರಯಾಣಿಸಿದ್ದಾಳೆ.

Last Updated : May 23, 2020, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.