ETV Bharat / bharat

ಬಿಹಾರ ಚುನಾವಣೆ: ಆರ್​​​ಜೆಡಿ ನೇತೃತ್ವದ ಮಹಾಮೈತ್ರಿಯಿಂದ ಪ್ರಣಾಳಿಕೆ ಬಿಡುಗಡೆ

author img

By

Published : Oct 17, 2020, 12:52 PM IST

ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಆರ್​ಜೆಡಿ ನೇತೃತ್ವದ ಮಹಾಮೈತ್ರಿಕೂಟ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ.

manifesto release
ಪ್ರಣಾಳಿಕೆ ರಿಲೀಸ್

ಪಾಟ್ನಾ(ಬಿಹಾರ) : ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮತದಾರರನ್ನು ಸೆಳೆಯಲು ಪಕ್ಷಗಳು ಜನಪರ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆ ರಿಲೀಸ್ ಮಾಡುತ್ತಿವೆ. ಆರ್​ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ ಪಕ್ಷಗಳ ಮಹಾಘಟ​​ಬಂಧನ್ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಸಮಯದಲ್ಲಿ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು:

ಮೈತ್ರಿಕೂಡ ಅಧಿಕಾರಕ್ಕೆ ಬಂದ ಕೂಡಲೇ ರೈತ ವಿರೋಧಿ ಮಸೂದೆಗಳನ್ನು ರದ್ದುಗೊಳಿಸುವುದು, 10 ಲಕ್ಷ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿಗಳಿಗೆ ನೆರವು, ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸುವುದು, ರಾಜ್ಯ ಬಜೆಟ್​​ನ ಶೇಕಡ 12 ರಷ್ಟು ಹಣ ಶಿಕ್ಷಣಕ್ಕಾಗಿ ಮೀಸಲು, ಪ್ರಾಥಮಿಕ ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ, ಪ್ರೌಢಶಾಲೆಯಲ್ಲಿ 35 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರ ನೇಮಕ, ಸ್ಮಾರ್ಟ್ ಗ್ರಾಮ ಯೋಜನೆಯಡಿ ಪ್ರತಿ ಪಂಚಾಯ್ತಿಯಲ್ಲೂ ಕ್ಲಿನಿಕ್​​ಗಳನ್ನು ನಿರ್ಮಿಸಿ, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಒತ್ತು ನೀಡುವುದು ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.

'ಬಿಹಾರಕ್ಕೆ ಟ್ರಂಪ್‌ ವಿಶೇಷ ಸ್ಥಾನಮಾನ ನೀಡಲ್ಲ'

ಈ ವೇಳೆ ಮಾತನಾಡಿದ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್, 'ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಕಳೆದ 15 ವರ್ಷಗಳಿಂದ ನಿತೀಶ್ ಕುಮಾರ್ ರಾಜ್ಯ ಆಳುತ್ತಿದ್ದಾರೆ. ಆದರೆ ರಾಜ್ಯಕ್ಕೆ ಇನ್ನೂ ವಿಶೇಷ ಸ್ಥಾನಮಾನ ಸಿಕ್ಕಿಲ್ಲ. ಅಮೆರಿಕಾ ಅಧ್ಯಕ್ಷ ರಾಜ್ಯಕ್ಕೆ ಬಂದು ವಿಶೇಷ ವರ್ಗದ ಸ್ಥಾನಮಾನ ನೀಡಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನಿತ್ಯ ಮೋಟಿಯಾರಿಯಾ ಕಾರ್ಖಾನೆಯ ಸಕ್ಕರೆ ಬಳಸಿದ ಚಹಾ ಕುಡಿಯುವುದಾಗಿ ಹೇಳಿದ್ದರು. ಆದರೆ, ಬಿಹಾರದಲ್ಲಿ ಸಕ್ಕರೆ ಕಾರ್ಖಾನೆ, ಸೆಣಬಿನ ಗಿರಣಿ, ಪೇಪರ್​ಮಿಲ್​​​, ಅಕ್ಕಿ ಗಿರಣಿಯನ್ನ ಮುಚ್ಚಿದರು. ರಾಜ್ಯದಲ್ಲಿ ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿಲ್ಲ. ನಿತೀಶ್ ಕುಮಾರ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈವರೆಗೆ 60 ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಜೆಡಿಯು ಇಷ್ಟೆಲ್ಲ ಹಗರಣಗಳನ್ನ ಮಾಡಿರುವುದರ ಹಿಂದೆ ಬಿಜೆಪಿಯಿದೆ ಎಂದು ಗಂಭೀರವಾಗಿ ಆರೋಪಿಸಿದರು. ಈಗಿನ ಸರ್ಕಾರ ಅಧಿಕಾರಕ್ಕಾಗಿ ಹಂಬಲಿಸುತ್ತಿದೆ. ಅವರಿಗೆ ಜನರ ಹಿತ ಮುಖ್ಯವಲ್ಲ. ರಾಜ್ಯದ 18 ನೆರೆಪೀಡಿತ ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ನೀಡಿಲ್ಲ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್​ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ ಮಹಾಮೈತ್ರಿ ರಚನೆ ಮಾಡಿಕೊಂಡಿವೆ. ಆ ಮೂಲಕ ಜೆಡಿಯು, ಬಿಜೆಪಿ ಹತ್ತಿಕ್ಕಲು ಯತ್ನಿಸುತ್ತಿದೆ.

ಅಕ್ಟೋಬರ್ 28 ರಿಂದ ರಾಜ್ಯದಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಹೊರ ಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.