ಬಿಹಾರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಲ್ಲಿ ತೊಡಗಿದ್ದಾರೆ. ಬಹದ್ದೂರ್ಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಚಾರಿ ಮಂಡಲ್, ಎಮ್ಮೆ ಮೇಲೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿ ಗಮನ ಸೆಳೆದರು.
ಬಳಿಕ ಮಾತನಾಡಿದ ಮಂಡಲ್, 'ನಾನು ಬಡವ, ಕೃಷಿ ಕಾರ್ಮಿಕನ ಮಗ, ನನ್ನ ಬಳಿಯಿರುವುದು ಈ ಎಮ್ಮೆ ಮಾತ್ರ. ಕಾರು, ಬೈಕ್ನಂತಹ ವಾಹನಗಳನ್ನು ನಾನು ಹೊಂದಿಲ್ಲ. ಹಾಗಾಗಿ ನಾನು ಎಮ್ಮೆ ಮೇಲೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಜನರು ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿದರೆ ರೈತರ ಅನುಕೂಲಕ್ಕಾಗಿ ಕೆಲಸ ಮಾಡುತ್ತೇನೆ. ದುರ್ಬಲ ವರ್ಗದವರಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು ಪ್ರಯ್ನತ್ತಿಸುತ್ತೇನೆ' ಎಂದರು.
-
#WATCH | Bihar: Nachari Mandal, an independent candidate from Bahadurpur constituency in Darbhanga, arrives to file his nomination on a buffalo. pic.twitter.com/9e7lygTqPr
— ANI (@ANI) October 19, 2020 " class="align-text-top noRightClick twitterSection" data="
">#WATCH | Bihar: Nachari Mandal, an independent candidate from Bahadurpur constituency in Darbhanga, arrives to file his nomination on a buffalo. pic.twitter.com/9e7lygTqPr
— ANI (@ANI) October 19, 2020#WATCH | Bihar: Nachari Mandal, an independent candidate from Bahadurpur constituency in Darbhanga, arrives to file his nomination on a buffalo. pic.twitter.com/9e7lygTqPr
— ANI (@ANI) October 19, 2020
ಹಿಂದಿನ ಶಾಸಕರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಜನರು ಈ ಬಾರಿ ಅವರನ್ನು ತಿರಸ್ಕರಿಸಿ, ನನಗೆ ಮತ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
ನಿನ್ನೆಯಷ್ಟೇ ಗಯಾದಲ್ಲಿ ಮಹಮ್ಮದ್ ಪರ್ವೇಜ್ ಮನ್ಸೂರಿ ಎಂಬುವವರು ಎಮ್ಮೆ ಮೇಲೆ ಕುಳಿತು ಚುನಾವಣಾ ಪ್ರಚಾರ ಮಾಡಿದರು. ಹಾಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.