ಬೆಂಗಳೂರು: ಇನ್ಮುಂದೆ ಹುಲಿಯನ್ನ ನರಭಕ್ಷಕ ಅಂತ ಕರೆಯಬಾರದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಪ್ರಾಧಿಕಾರ ಹೊರಡಿಸಿರುವ ಪರಿಷ್ಕೃತ ಕಾರ್ಯವಿಧಿಯಲ್ಲಿ ಈ ಅಂಶ ಸೇರಿದೆ.
ಹುಲಿಗಳು ಆಕಸ್ಮಾತ್ ಆಗಿ ಮನುಷ್ಯರನ್ನ ಕೊಂದಿರಬಹುದು. ಅದೇ ಕಾರಣಕ್ಕೆ ಹುಲಿಗಳು ನರಭಕ್ಷಕರಾಗಿ ಬದಲಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಹುಲಿಯನ್ನು ನರಭಕ್ಷಕ ಎನ್ನುವ ಬದಲು ನರ ಕಂಟಕ ಅಂತಾ ಕರೆಯಬಹುದೆಂದು ಪ್ರಾಧಿಕಾರ ತಿಳಿಸಿದೆ.
ಒಂದು ವೇಳೆ ಹುಲಿ ಮನುಷ್ಯರಿಗೆ ಉಪಟಳ ನೀಡುತ್ತಿರುವುದು ಗೊತ್ತಾದರೇ ಅದನ್ನು ತಕ್ಷಣ ಹಿಡಿಯುವ ಪ್ರಯತ್ನ ನಡೆಸಬೇಕು ಎಂದು ಆದೇಶಿಸಿದೆ. ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಖಾಸಗಿ ವ್ಯಕ್ತಿಗಳ ಪ್ರವೇಶವನ್ನು, ಶಾರ್ಪ್ ಶೂಟರ್ಗಳನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.
ಈ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.