ETV Bharat / bharat

ಒನ್‌ಟೈಮ್​ನಲ್ಲೇ 2,100 ರೈತರ ಸಾಲ ತೀರಿಸಿದ ಬಿಗ್‌ಬಿ .. ನುಡಿದಂತೆ ನಡೆದರು 'ಅಮಿತಾಬ್​ ಬಚನ್​.. -

ಬ್ಯಾಂಕ್​ಗಳಲ್ಲಿ ಕೃಷಿ ಸಾಲ ಮಾಡಿದ್ದ ಬಿಹಾರದ 2,100 ರೈತರ ಸಾಲದ ಹಣವನ್ನು ಅಮಿತಾಬ್ ಒಬ್ಬರೇ ಪಾವತಿಸಿದ್ದಾರೆ. ಈ ಮೂಲಕ ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಜವಾಬ್ದಾರಿಯುತ ನಟನಾಗಿ ಮಾಡಿದ್ದಾರೆ ಎಂಬ ಪ್ರಶಂಸೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಚಿತ್ರ ಕೃಪೆ: ಟ್ವಿಟ್ಟರ್​
author img

By

Published : Jun 12, 2019, 2:57 PM IST

ಮುಂಬೈ: ಬಾಲಿವುಡ್​ನ ಬಿಗ್ ಬಿ ಎಂದೇ ಖ್ಯಾತರಾದ ನಟ ಅಮಿತಾಬ್ ಬಚನ್ ಆಫ್​ ಸ್ಕ್ರೀನ್​ನಲ್ಲೂ ತಾವೂಬ್ಬ ದೊಡ್ಡ ಹೃದಯವಂತ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಬ್ಯಾಂಕ್​ಗಳಲ್ಲಿ ಕೃಷಿ ಸಾಲ ಮಾಡಿದ್ದ ಬಿಹಾರದ 2,100 ರೈತರ ಸಾಲದ ಹಣವನ್ನು ಅಮಿತಾಬ್ ಒಬ್ಬರೇ ಪಾವತಿಸಿದ್ದಾರೆ. ಈ ಮೂಲಕ ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಜವಾಬ್ದಾರಿಯುತ ನಟನಾಗಿ ಮಾಡಿದ್ದಾರೆ ಎಂಬ ಪ್ರಶಂಸೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ನಾನು ಮಾಡಿದ್ದ ಒಂದು ಭರವಸೆಯನ್ನು ಈಡೇರಿಸಿದ್ದೇನೆ... ಬಿಹಾರದ ರೈತರ ಸಾಲ ಮಾಡಿದ್ದರು. ಬ್ಯಾಂಕ್​ಗಳಲ್ಲಿ 2,100 ರೈತರು ತೆಗೆದುಕೊಂಡಿದ್ದ ಸಾಲವನ್ನು ಒಂದು ಬಾರಿ ಪಾವತಿಸಿ (ಒನ್ ಟೈಮ್ ಸೆಟಲ್ ಮೆಂಟ್) ಮೂಲಕ ನೀಡಿದ್ದೇನೆ ಎಂದು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಸಾಲ ಪಡೆದು ಪಾವತಿಸಲಾಗದ ಬಿಹಾರದ ರೈತರಿಗೆ ಇದನ್ನು ಉಡುಗರೆಯಾಗಿ ನೀಡಿದ್ದೇನೆ ಎಂದಿದ್ದಾರೆ. ರೈತರ ಸಾಲ ಪಾವತಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾವಿರಾರು ಕೃಷಿಕರ ಸಾಲದ ಹಣ ಪಾವತಿಸಿದ್ದಾರೆ ಅಮಿತಾಬ್‌. 76ರ ಪ್ರಾಯದ ನಟ ಮತ್ತೊಂದು ಭರವಸೆಯನ್ನು ಪೂರ್ಣಗೊಳ್ಳಿಸಿದ್ದಾರೆ. ಬರೀ ದೈಹಿಕವಾಗಿ ಅಷ್ಟೇ ಅಲ್ಲ, ಮಾನವೀಯತೆಯ ಗುಣದಿಂದಲೂ ಅಮಿತಾಬ್‌ ತಾವೊಬ್ಬ ಎತ್ತರ ವ್ಯಕ್ತಿತ್ವವುಳ್ಳವರು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.