ನವದೆಹಲಿ: 70 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳ 8ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸಿದ್ದು, ಇದೀಗ ಭಾರತೀಯ ಜತನಾ ಪಾರ್ಟಿ ತನ್ನ ಮೊದಲ ಪಟ್ಟಿ ರಿಲೀಸ್ ಮಾಡಿದೆ.
-
Bharatiya Janata Party announces names of 57 candidates out of 70 for upcoming Delhi assembly elections. pic.twitter.com/eJEYYPm5X3
— ANI (@ANI) January 17, 2020 " class="align-text-top noRightClick twitterSection" data="
">Bharatiya Janata Party announces names of 57 candidates out of 70 for upcoming Delhi assembly elections. pic.twitter.com/eJEYYPm5X3
— ANI (@ANI) January 17, 2020Bharatiya Janata Party announces names of 57 candidates out of 70 for upcoming Delhi assembly elections. pic.twitter.com/eJEYYPm5X3
— ANI (@ANI) January 17, 2020
70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದು, ಇದೀಗ ಪಟ್ಟಿ ರಿಲೀಸ್ ಮಾಡಿದೆ. ಪ್ರಮುಖವಾಗಿ ಮಾಡಲ್ ಟೌನ್ನಿಂದ ಕಪಿಲ್ ಮಿಶ್ರಾ, ರೋಹಿಣಿಯಿಂದ ವಿಜೇಂದ್ರ ಗುಪ್ತಾ, ಸಿಲಿಮಾರ್ ಬಾಘ್ನಿಂದ ರೇಖಾ ಗುಪ್ತಾ, ಚಾಂದಿನಿ ಚೌಕ್ನಿಂದ ಸುಮನ್ ಕುಮಾರ್ ಗುಪ್ತಾ ಕಣಕ್ಕಿಳಿಯಲಿದ್ದಾರೆ.
ಈಗಾಗಲೇ ಎಲ್ಲ 70 ಕ್ಷೇತ್ರಗಳಿಗೂ ಆಡಳಿತ ಪಕ್ಷ ಆಮ್ ಆದ್ಮಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಕಾಂಗ್ರೆಸ್ ಇಲ್ಲಿಯವರೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿಲ್ಲ. ಫೆ. 8ರಂದು ಒಂದೇ ಹಂತದಲ್ಲಿ ವೋಟಿಂಗ್ ನಡೆಲಿದ್ದು, 11ರಂದು ಫಲಿತಾಂಶ ಹೊರಬಿಳಲಿದೆ.