ETV Bharat / bharat

ನೀರಿನಿಂದ ಮೇಲಕ್ಕೆ ತಂದು ಬದುಕಿಸಿದವರ ಮೇಲೆನೇ ಜಾಂಬವಂತನ ದಾಳಿ.. - ವೆಲುಗೋಡು ಜಲಾಶಯ

ಬದುಕಿಸೋದಕ್ಕೆ ಅಂತ ಅರಣ್ಯ ಸಿಬ್ಬಂದಿ ರಿಸ್ಕ್ ತೆಗೆದುಕೊಂಡು ನೀರಿಗಿಳಿದು ಕರಡಿಯನ್ನ ರಕ್ಷಿಸಿದ್ದರು. ಆದರೆ, ಅದೇ ಕರಡಿ ನೀರಿನಿಂದ ಮೇಲಕ್ಕೆತ್ತಿದ್ದವರ ಮೇಲೆಯೇ ದಾಳಿ ಮಾಡಿಬಿಟ್ಟಿತ್ತು.

ರಕ್ಷಿಸಲು ಬಂದವರ ಮೇಲೆಯೇ ತಿರುಗಿಬಿದ್ದ ಕರಡಿ
author img

By

Published : Mar 24, 2019, 12:42 PM IST

ಕರ್ನೂಲ್ :

ಬದುಕಲಿ ಅದೂ ಜೀವ ಅಲ್ಲವೇ ಅಂತ ಅರಣ್ಯ ಇಲಾಖೆ ಸಿಬ್ಬಂದಿ ರಿಸ್ಕ್ ತೆಗೆದುಕೊಂಡು ನೀರಿಗೆ ಬಿದ್ದಿದ್ದ ಕರಡಿಯನ್ನ ಮೇಲಕ್ಕೆ ತಂದಿದ್ದರು. ಆದರೆ, ನೀರಿನಿಂದ ಮೇಲಕ್ಕೆ ಬಂದು ಬದುಕುಳಿದ ಕರಡಿ, ತನ್ನ ಬದುಕಿಸಿದ ಅರಣ್ಯ ಸಿಬ್ಬಂದಿಯನ್ನೇ ಅಟ್ಟಾಡಿಸಿ ದಾಳಿ ಮಾಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ವೆಲುಗೋಡು ಜಲಾಶಯದಲ್ಲಿ ಈ ಘಟನೆ ನಡೆದಿದೆ.

ಕರಡಿಯೊಂದು ನೀರಿಗೆ ಬಿದ್ದ ಸುದ್ದಿ ತಿಳಿದು ಅದನ್ನ ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿತ್ತು. ನೀರಿನಿಂದ ಕರಡಿಯನ್ನು ರಕ್ಷಿಸುತ್ತಿದ್ದಂತೆ, ಅದು ರಕ್ಷಕರ ಮೇಲೆಯೇ ದಾಳಿ ಮಾಡಿದೆ. ಪರಿಣಾಮ ಅರಣ್ಯ ಇಲಾಖೆಯ ಸಿಬ್ಬಂದಿ ವಿಜಯ್ ಕುಮಾರ್ ಎಂಬುವರು ಗಾಯಗೊಂಡಿದ್ದು, ಅವರನ್ನ ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಿಸಲು ಬಂದವರ ಮೇಲೆಯೇ ತಿರುಗಿಬಿದ್ದ ಕರಡಿ.

ತನ್ನನ್ನು ರಕ್ಷಿಸಿದ್ದವರ ಮೇಲೆ ಕರಡಿಗೆ ಅದೇನ್ ಕೋಪವೋ ಏನೋ.. ಬೆನ್ನಟ್ಟಿ ಅವರ ಮೇಲೆನೇ ದಾಳಿ ಮಾಡಿದೆ. ಬಳಿಕ ಸಿಬ್ಬಂದಿ ಕೋಲಿನಿಂದ ಹೊಡೆದು ಕರಡಿಯನ್ನ ಓಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ವಿಡಿಯೋದಲ್ಲಿ ಈ ಘಟನೆ ಸೆರೆಯಾಗಿದೆ.

Intro:Body:

ರಕ್ಷಿಸಲು ಬಂದವರ ಮೇಲೆಯೇ ತಿರುಗಿಬಿದ್ದ ಕರಡಿ...! 

ಕರ್ನೂಲ್: ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದ ಕರಡಿವೊಂದು ರಕ್ಷಿಸಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದೆ. ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ವೆಲುಗೋಡು ಜಲಾಶಯದಲ್ಲಿ ಈ ಘಟನೆ ನಡೆದಿದೆ. 

ನೀರಿಗೆ ಬಿದ್ದಿದ್ದ ಕರಡಿಯನ್ನು ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿತ್ತು. ನೀರಿನಿಂದ ಕರಡಿಯನ್ನು ರಕ್ಷಿಸುತ್ತಿದ್ದಂತೆ, ಅದು ರಕ್ಷಕರ ಮೇಲೆಯೇ ದಾಳಿ ಮಾಡಿದೆ. ಪರಿಣಾಮ ಅರಣ್ಯ ಇಲಾಖೆಯ ವಿಜಯ್ ಕುಮಾರ್ ಗಾಯಗೊಂಡಿದ್ದು, ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ರಕ್ಷಿಸಲು ಬಂದವರನ್ನ ಕರಡಿ ಬೆನ್ನಟ್ಟಿ ದಾಳಿ ಮಾಡಿದೆ. ಬಳಿಕ ಸಿಬ್ಬಂದಿ ಕೋಲಿನಿಂದ ಹೊಡೆದು ಕರಡಿಯನ್ನ ಓಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.