ETV Bharat / bharat

ಆರ್ಥಿಕತೆ ತೆರೆದುಕೊಳ್ತಿದ್ದಂತೆ ಹೆಚ್ಚಿನ ಜಾಗ್ರತೆ ಅವಶ್ಯ: ಮನ್‌ ಕಿ ಬಾತ್‌ನಲ್ಲಿ ಮೋದಿ - lock down

ಪ್ರಧಾನಿ ಮೋದಿ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ದೇಶದ ಆರ್ಥಿಕತೆ ತೆರೆದುಕೊಳ್ಳುತ್ತಿದ್ದು ಹೆಚ್ಚಿನ ಮುಂಜಾಗ್ರತೆ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : May 31, 2020, 12:18 PM IST

ನವದೆಹಲಿ: ಕೊರೊನಾ ಏಟಿನಿಂದ ತತ್ತರಿಸಿದ ಬಳಿಕ ದೇಶದ ಆರ್ಥಿಕತೆ ತೆರೆದುಕೊಳ್ಳುತ್ತಿದ್ದು, ಈ ವೇಳೆ ಹೆಚ್ಚಿನ ಜಾಗ್ರತೆಯ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ತಮ್ಮ ಮನ್​ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಹರಡುತ್ತಿರುವಷ್ಟು ವೇಗವಾಗಿ ಕೊರೊನಾ ನಮ್ಮ ದೇಶದಲ್ಲಿ ಹರಡುತ್ತಿಲ್ಲ. ನಮ್ಮ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಅವಕಾಶಗಳು ತೆರೆದಿವೆ. ಈ ಅವಕಾಶಗಳೊಂದಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿಯ ಮನ್​ ಕಿ ಬಾತ್​ ರೇಡಿಯೋ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:

  • ಲಾಕ್​​ಡೌನ್​ 5.o ಘೋಷಣೆಯಾಗಿದ್ದು, ವಿಶೇಷ ಸಡಿಲಿಕೆಗಳನ್ನು ಮಾಡಲಾಗಿದೆ.
  • ಕೊರೊನಾ ವಿರುದ್ಧದ ಹೋರಾಟಕ್ಕೆ ರಾಷ್ಟ್ರ ಒಗ್ಗಟ್ಟಾಗಿದ್ದು, ಜನರು ನೆರವು ನೀಡುತ್ತಿದ್ದಾರೆ.
  • ಕೊರೊನಾ ಅವಧಿಯಲ್ಲಿ ಹಲವಾರು ರೀತಿಯ ಸಂಶೋಧನೆಗಳು ನಡೆಯುತ್ತಿವೆ.
  • ವಲಸೆ ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಸತತವಾಗಿ ಶ್ರಮಿಸುತ್ತಿದೆ.
  • ಆಯುಷ್ಮಾನ್​ ಭಾರತ್​ ಯೋಜನೆಯಿಂದ ಜನ ಪ್ರಯೋಜನ ಪಡೆದಿದ್ದಾರೆ.
  • ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಂಫಾನ್​ ಸಂಕಷ್ಟ ನಿವಾರಣೆಗೆ ಶ್ರಮಿಸಿದ್ದೇವೆ.
  • ಜನತೆ ಸ್ವದೇಶಿ ಉತ್ಪನ್ನಗಳನ್ನು ಬಳಸಿ, ಆತ್ಮ ನಿರ್ಭರ ಭಾರತದ ಕನಸು ನನಸಾಗಿಸಬೇಕು.
  • ಕೆಲ ರಾಜ್ಯಗಳಲ್ಲಿ ಮಿಡತೆಗಳ ದಾಳಿ ಹೆಚ್ಚಾಗಿದ್ದು, ಕೃಷಿ ಇಲಾಖೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ.
  • ನಾವು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಲಿದ್ದೇವೆ.
  • ಅನಗತ್ಯವಾಗಿ ಯಾರೂ ಕೂಡಾ ಮನೆಯಿಂದ ಹೊರಬರಬೇಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.