ETV Bharat / bharat

ಐಪಿಎಲ್​ ರದ್ಧುಗೊಳಿಸಲು ಹೆಚ್ಚಿದ ಒತ್ತಡ... ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ; ಗಂಗೂಲಿ!

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯುವುದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದ್ದು, ಐತಿಹಾಸಿಕ ಕ್ರೀಡಾಕೂಟ ಒಲಿಂಪಿಕ್ಸ್​ ಮುಂದೂಡಿಕೆಯಾಗುತ್ತಿದ್ದಂತೆ ಶ್ರೀಮಂತ ಕ್ರಿಕೆಟ್​ ಟೂರ್ನಿ ರದ್ಧುಗೊಳಿಸುವಂತೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿದೆ.

BCCI will be under tremendous pressure
ಇಂಡಿಯನ್​ ಪ್ರೀಮಿಯರ್​ ಲೀಗ್​​
author img

By

Published : Mar 25, 2020, 4:56 PM IST

ಮುಂಬೈ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚು ಉಲ್ಭಣಗೊಳ್ಳುತ್ತಿದ್ದು, ಹೀಗಾಗಿ ಅನೇಕ ಕ್ರೀಡಾ ಕೂಟಗಳು ಮುಂದೂಡಿಕೆಯಾಗಿವೆ. ಇದರ ಬೆನ್ನಲ್ಲೇ ಇದೇ ತಿಂಗಳ ಕೊನೆಯಲ್ಲಿ(ಮಾರ್ಚ್​​ 29) ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿದ್ದು, ಏಪ್ರಿಲ್​ 15ರ ನಂತರ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿತ್ತು. ಆದರೆ, ಇದೀಗ ಮಹತ್ವದ ಕ್ರೀಡಾಕೂಟ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ಕಾರಣ ಐಪಿಎಲ್​ ರದ್ಧುಗೊಳಿಸುವಂತೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿದೆ.

ಟೋಕಿಯೋ ಒಲಿಂಪಿಕ್ಸ್​​ ನಿಗದಿಯಾಗಿರುವಂತೆ ಜುಲೈ 24ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ರಕ್ಕಸ ಮಹಾಮಾರಿ ಕೊರೊನಾ ತನ್ನ ವ್ಯಾಪಕತೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ವರ್ಷ ಮುಂದೂಡಿಕೆ ಮಾಡಿ ನಿನ್ನೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

BCCI will be under tremendous pressure
ಸೌರವ್​ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಇದರ ಬೆನ್ನಲ್ಲೇ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಸುವ ಕುರಿತು ಎಲ್ಲ ಪ್ರಾಂಚೈಸಿಗಳೊಂದಿಗೆ ನಡೆದ ವಿಡಿಯೋ ಸಂವಾದ ಕೂಡ ಅರ್ಧಕ್ಕೆ ಮೊಟಕುಗೊಂಡಿರುವ ಕಾರಣ ಈ ಸಲದ ಐಪಿಎಲ್​ ನಡೆಯುವುದು ಬಹುತೇಕ ಕಠಿಣವಾಗಿದೆ. ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಮುಂದಿನ 21 ದಿನಗಳ ಕಾಲ ದೇಶವನ್ನ ಸಂಪೂರ್ಣವಾಗಿ ಲಾಕ್​ಡೌನ್​ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಐಪಿಎಲ್​ ಕೂಡ ಆರಂಭಗೊಳ್ಳುವುದು ಅನುಮಾನ ಎನ್ನಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ, ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ಟೂರ್ನಿ ಆಯೋಜನೆ ಕುರಿತು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸದ್ಯ ಕಾಯ್ದು ನೋಡುವ ತಂತ್ರಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ. ಇನ್ನು ಏಪ್ರಿಲ್​ ಮುಕ್ತಾಯದ ವೇಳೆಗೆ ಕೊರೊನಾ ಪರಿಸ್ಥಿತಿ ಸುಧಾರಣೆ ಕಂಡರೆ ಜುಲೈ ತಿಂಗಳಲ್ಲಿ ಅಥವಾ ಸೆಪ್ಟೆಂಬರ್​ನಲ್ಲಿ ಇದರ ಆಯೋಜನೆ ಮಾಡುವ ಬಗ್ಗೆ ವೇಳಾಪಟ್ಟಿ ರಚಿಸುವ ಇರಾದೆಯಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.