ಹರ್ದೋಯಿ (ಉತ್ತರ ಪ್ರದೇಶ): ಕೊರೊನಾ ಲಾಕ್ಡೌನ್ನಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಾಮಾನ್ಯವಾಗಿ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಏಪ್ರಿಲ್ 1 ರಿಂದ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಲಾಕ್ಡೌನ್ ಆದ ನಂತರ ಶಾಲೆಗಳಿಗೆ ಬೀಗ ಹಾಕಲಾಗಿದೆ. ಈ ಕಾರಣಕ್ಕಾಗಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ವಾಟ್ಸ್ ಆ್ಯಪ್ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ.
ಈ ಹಿನ್ನೆಲೆ ಪಠ್ಯಕ್ರಮಕ್ಕೆ ತಕ್ಕಂತೆ ಸುಮಾರು 900 ವಿಡಿಯೋಗಳನ್ನು ಸಿದ್ಧಪಡಿಸಲಾಗ್ತಿದ್ದು, ಮಕ್ಕಳ ಪೋಷಕರ ಮೊಬೈಲ್ ಸಂಖ್ಯೆಗೆ ಈ ವಿಡಿಯೋಗಳನ್ನು ಕಳುಹಿಸಲಾಗುವುದು. ಈ ವಿಡಿಯೋಗಳ ಮೂಲಕ ಮಕ್ಕಳು ಪಾಠಗಳನ್ನು ಕಲಿಯಬಹುದಾಗಿದೆ.
ಹರ್ದೋಯಿ ಜಿಲ್ಲೆಯಲ್ಲಿ ಸುಮಾರು 2828 ಪ್ರಾಥಮಿಕ ಶಾಲೆಗಳಿದ್ದು, ಈ ಶಾಲೆಗಳ ಸುಮಾರು 4,28,922 ವಿದ್ಯಾರ್ಥಿಗಳಿಗೆ ಈ ವಾಟ್ಸ್ ಆ್ಯಪ್ ತರಗತಿಗಳು ಲಭ್ಯವಾಗಲಿವೆ. ಈ ಮೂಲಕ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ.