ಇಂದು ಬ್ಯಾಂಕುಗಳು ಜನಸಾಮಾನ್ಯರ ಬದುಕಿನ ಜೊತೆ ಅವಿನಾಭಾವ ಸಂಬಂಧ ಹೊಂದಿವೆ. ದೇಶದ ಜನಸಂಖ್ಯೆಯ ಹೆಚ್ಚಿನ ಭಾಗ ಕನಿಷ್ಟ ಒಂದಾದ್ರೂ ಬ್ಯಾಂಕ್ ಅಕೌಂಟ್ ಹೊಂದಿದೆ. ಕೃಷಿ, ಶಿಕ್ಷಣ, ಸ್ವ ಉದ್ಯೋಗ, ವಹಿವಾಟು, ವಾಹನ ಹೀಗೆ ನಾನಾ ಬಗೆಯ ಕಾರಣಕ್ಕೋಸ್ಕರ ಬೇರೆ ಬೇರೆ ಬಡ್ಡಿದರಗಳಲ್ಲಿ ಸಾಲ ಸೌಲಭ್ಯಗಳು ಸಿಗ್ತಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಂದು ತೆಗೆದುಕೊಂಡು ದಿಟ್ಟ ನಿಲುವು! ಬ್ಯಾಂಕುಗಳು ರಾಷ್ಟ್ರೀಕರಣಗೊಂಡು 50 ವರ್ಷಗಳು ಕಳೆದಿವೆ.
ನರೇಂದ್ರ ಮೋದಿ 2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ 2ನೇ ಬಾರಿಗೆ ಅಧಿಕಾರದ ಗದ್ದುಗೆಗೇರಲು ಸಾರ್ವಜನಿಕ ವಲಯದ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸಿದ್ದವು. ಮೋದಿ 2014 ರಲ್ಲಿ ಕೇಂದ್ರ ಸರ್ಕಾರದ ಗದ್ದುಗೆ ಹಿಡಿದ ಮೂಲಕ ಜಾರಿಗೆ ತಂದ ಅತ್ಯಂತ ಮಹತ್ವದ್ದು ಜನಧನ ಯೋಜನೆ. ಈ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕುಗಳ ಸೌಕರ್ಯ ಸಿಗಬೇಕು ಎನ್ನುವ ಉದ್ದೇಶ ಅವರ ಈ ಯೋಜನೆಯದ್ದಾಗಿತ್ತು. ಈ ಮೂಲಕ ಸರ್ಕಾರದ ಸಬ್ಸಿಡಿಗಳು ಜನರಿಗೆ ನೇರವಾಗಿ ಸಿಗುವಂತಾಗಲು ಬ್ಯಾಂಕುಗಳು ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಂತೆ ಕೆಲಸ ಮಾಡಿದ್ವು. ಈ ಮೂಲಕ ಸರ್ಕಾರದ ಯೋಜನೆಗಳು ಸೋರಿಕೆಯಾಗಿ ಪೋಲಾಗದೆ ನೇರವಾಗಿ ಫಲಾನುಭವಿಗಳ ಜೇಬು ಸೇರುವುದರ ಜೊತೆಗೆ,ಭ್ರಷ್ಟಾಚಾರಕ್ಕೂ ದೊಡ್ಡ ಮಟ್ಟಿನ ಕಡಿವಾಣ ಬಿತ್ತು. ಜನಸಾಮಾನ್ಯರಿಗೆ ಬ್ಯಾಂಕ್ ಸೇವೆ ಮಾತ್ರವೇ ಅಲ್ಲ, ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ಸಹಾಯ, ಉದ್ದಿಮೆದಾರರಿಗೆ ಸಾಲ ಸೌಲಭ್ಯ, ಕೌಶಲ್ಯ ಯೋಜನೆ, ದಿವ್ಯಾಂಗರಿಗೆ ಹಣಕಾಸು ನೆರವು ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಅತ್ಯಂತ ಸುಲಭವಾಯ್ತು. ಬ್ಯಾಂಕುಗಳು ಜನಸಾಮಾನ್ಯರು ಮತ್ತು ಸರ್ಕಾರದ ಜೊತೆ ಕೊಂಡಿಯಾಗಿ ಕೆಲಸ ಮಾಡಿದ ಪರಿಣಾಮ ಇದು.
ಮೋದಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಬೇಕಿದ್ದರೆ, ಅವರು ಅಧಿಕಾರಕ್ಕೆೇರುವ 45 ವರ್ಷಗಳ ಹಿಂದೆ ಇಂದಿರಾ ಸರ್ಕಾರ, ಬ್ಯಾಂಕುಗಳಿಗೆ ನೀಡಿದ ರಕ್ಷಣೆಯೇ ಕಾರಣ. ಖಾಸಗಿ ಬ್ಯಾಂಕುಗಳಗಿ ಸಾರ್ವಜನಿಕ ಸೇವೆಯ ಸ್ವರೂಪ ನೀಡಿದ್ದೇ ಮೋದಿ ಯೋಜನೆಯ ಯಶಸ್ಸಿಗೆ ಕಾರಣವಾಗಿದೆ.
ಮುಖ್ಯಾಂಶಗಳು:
- ಜುಲೈ 19ಕ್ಕೆ ಬ್ಯಾಂಕುಗಳ ರಾಷ್ಟ್ರೀಕರಣವಾಗಿ 50 ವರ್ಷಗಳು ತುಂಬುತ್ತಿವೆ.
- ಸುಗ್ರಿವಾಜ್ಞೆ ಮೂಲಕ ಇಂದಿರಾ ಗಾಂಧಿ 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು.
- 14 ಖಾಸಗಿ ಬ್ಯಾಂಕುಗಳು ರಾಷ್ಟ್ರೀಕರಣದಿಂದಾಗಿ ಕೃಷಿ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹಣಕಾಸು ನೆರವು ಸಾಧ್ಯವಾಯ್ತು.
ಬ್ಯಾಂಕುಗಳ ರಾಷ್ಟ್ರೀಕರಣ ಏಕೆ?
- 1947 ರಿಂದ 1955 ರವರೆಗೆ 360 ಕ್ಕೂ ಹೆಚ್ಚು ಬ್ಯಾಂಕುಗಳು ವಿಫಲವಾಗಿದ್ದವು.
- ಪ್ರತಿ ವರ್ಷಕ್ಕೆ ಸರಾಸರಿ 40 ಬ್ಯಾಂಕುಗಳು ವಿಫಲವಾಗುತ್ತಿದ್ದವು.
- ಇದೇ ಟ್ರೆಂಡ್ 1950 , 1960 ರಲ್ಲೂ ಮುಂದುವರೆಯಿತು.
- ಈ ಬೆಳವಣಿಗೆ ಇಂದಿರಾ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮೋರಾರ್ಜಿ ದೇಸಾಯಿ ಚಿಂತೆಗೀಡು ಮಾಡುತ್ತೆ.
- ಅವರು ಖಾಸಗಿ ಸ್ವಾಮ್ಯದ ಬ್ಯಾಂಕುಗಳ ಒಗ್ಗೂಡಿಸುವ ಚಿಂತನೆ ಮಾಡಿದ್ರು. ಪರಿಣಾಮ ದೇಶದಲ್ಲಿದ್ದ 1960 ರಲ್ಲಿ 328 ಬ್ಯಾಂಕುಗಳ ಸಂಖ್ಯೆ 68 ಕ್ಕೆ ಇಳಿಯಿತು.
- ಆ ಸಂದರ್ಭದಲ್ಲಿ ಬ್ಯಾಂಕುಗಳು ಕೃಷಿ, ಕೈಗಾರಿಕೆಗಳಿಗೆ ಸಾಲ ಸೌಲಭ್ಯ ನೀಡುತ್ತಿರಲಿಲ್ಲ.
- ಆ ವೇಳೆ ಬ್ಯಾಂಕುಗಳು ಕೇವಲ ವ್ಯಾಪಾರಕ್ಕೆ ಮಾತ್ರ ಸಾಲ ನೀಡೋದ್ರಲ್ಲೇ ಮಗ್ನವಾಗಿರುತ್ತಿದ್ದವು. ಅಂದ್ರೆ ಸಾಲ ಸೌಲಭ್ಯ ಶ್ರೀಮಂತರ ಸ್ವತ್ತಾಗಿತ್ತು.
- ದೇಶದ ಬಹುದೊಡ್ಡ ಸಮಸ್ಯೆಯೊಂದು ಇಂದಿರಾಗೆ ವರವಾಗಿ ಪರಿಣಮಿಸಿತು.
- ಖಾಸಗಿ ಬ್ಯಾಂಕುಗಳನ್ನು ಸಾರ್ವಜನಿಕ ಸ್ವತ್ತಾಗಿಸಿದ ಇಂದಿರಾ ನಿರ್ಧಾರ ಅವರನ್ನು 'ಹೀರೋ' ಆಗಿಸಿತು.
ಮೋದಿಗೆ ಲಾಭವಾಗಿದ್ದು ಹೇಗೆ?
- ಕೇಂದ್ರದ ಬಹುತೇಕ ಯೋಜನೆಗಳು ಜನಸಾಮಾನ್ಯರಿಗೆ ಬ್ಯಾಂಕುಗಳ ಮೂಲಕ ಇಂದು ನಿರಾಯಾಸವಾಗಿ ತಲುಪುತ್ತಿವೆ.
- ಬ್ಯಾಂಕುಗಳ ಖಾತೆಗಳಿಗೆ ಸಬ್ಸಿಡಿಗಳ ನೇರ ವರ್ಗಾವಣೆ,
- ಮುದ್ರಾ ಯೋಜನೆ ಮೂಲಕ 20 ಕೋಟಿ ಜನರಿಗೆ ಸಾಲಸೌಲಭ್ಯ.
- ಸಾರ್ವಜನಿಕ ಉದ್ದಿಮೆಗಳಿಗೆ ಸಾಲ ಸೌಲಭ್ಯ