ಛತ್ತೀಸ್ಗಢ: ಇಲ್ಲಿನ ಬಲೋದಾ ಬಜಾರ್ ಬಳಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಖರೀದಿಗೆಂದು ರಾಯ್ಪುರಕ್ಕೆ ತೆರಳಿದ್ದ ಕುಟುಂಬವೊಂದು ಹಿಂತರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪೋಷಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಗಂಭೀರ ಗಾಯಗೊಂಡಿದ್ದಾಳೆ.
ಇನ್ನೂ ನಮಗೆ ದೊರಕಿರುವ ವೀಡಿಯೋ ಒಂದರಲ್ಲಿ, ಅಪಘಾತದ ಫೋಟೋ ಗಳನ್ನು ಸರೆಹಿಡಿಯುತ್ತಿದ್ದ ಸಾರ್ವಜನಿಕರಿಗೆ ಕಿರಿಯ ಮಗಳು, ದಯವಿಟ್ಟು ಫೋಟೋ ತೆಗೆಯೋದನ್ನು ನಿಲ್ಲಿಸಿ, ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ ಎಂದು ಕೇಳಿಕೊಳ್ಳುತ್ತಿದ್ದದ್ದು ಸೆರೆಯಾಗಿದೆ.
ತಂದೆ ತಾಯಿ ಸ್ಥಳದಲ್ಲೇ ತೀರಿಕೊಂಡ ವಿಷಯ ತಿಳಿದ ನಂತರ ಅವರ ಕಿರಿಯ ಮಗಳೇ ಮರಣೋತ್ತರ ಕ್ರಿಯಾಕರ್ಮಗಳನ್ನು ಮುಗಿಸಿದ್ದಾಳೆ. ಇನ್ನೂ, ಹಿರಿಯ ಮಗಳು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.
ತಂದೆ ತಾಯಿ ಕಳೆದುಕೊಂಡು, ಅಕ್ಕ ಆಸ್ಪತ್ರೆಯಲ್ಲಿರುವಾಗ ಧೈರ್ಯವಾಗಿ ತಂದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿರುವ ಈ ಹೆಣ್ಣುಮಗಳು ಸೆಲ್ಫಿ ವೀರರಿಗೆ ಸಂದೇಶ ರವಾನಿಸಿದ್ದು ಎಂತಹವರನ್ನೂ ಮನಕಲುಕುವಂತೆ ಮಾಡಿದ್ದು ಸುಳ್ಳಲ್ಲ. ಅಪಘಾತವಾದಾಗ ಗಾಯಾಳುಗಳನ್ನ ರಕ್ಷಣೆ ಮಾಡಬೇಕಿದೆ. ಬದಲಿಗೆ ಸೆಲ್ಫಿ ತೆಗೆಯದೇ ಆಸ್ಪತ್ರೆಗೆ ಸಾಗಿಸಬೇಕಿದೆ. ಆದರೆ ಜನ ಸೆಲ್ಫಿ ತೆಗೆಯೋದು ಫೋಟೋ ತೆಗೆಯುವುದನ್ನ ಮುಂದುವರೆಸಿದ್ದಾರೆ. ಇದು ದುರ್ದೈವವೇ ಸರಿ