ETV Bharat / bharat

ಲೋಕಮಾನ್ಯ ಬಾಲ ಗಂಗಾಧರ ತಿಲಕ್; ಒಂದು ಸ್ಮರಣೆ - ಲಾಲ್-ಬಾಲ್-ಪಾಲ್

ಆಗಿನ ಸಮಯದಲ್ಲಿ ಇಂಗ್ಲಿಷ್​ ಕಲಿತವರ ಸಂಖ್ಯೆ ತುಂಬಾ ವಿರಳವಾಗಿತ್ತು. ಆದರೆ ನಾಗರಿಕ ಹಕ್ಕುಗಳ ಪ್ರತಿಪಾದನೆ ಹಾಗೂ ಪ್ರಗತಿಪರ ವಿಚಾರಧಾರೆಯ ಬೆಳವಣಿಗೆಗೆ ಇಂಗ್ಲಿಷ್ ಕಲಿಕೆ ಬಹುದೊಡ್ಡ ಅಸ್ತ್ರ ಎಂದು ತಿಲಕರು ಪ್ರಬಲವಾಗಿ ನಂಬಿದ್ದರು. ಹೀಗಾಗಿ ಸಮಾಜದ ಕೆಳವರ್ಗದವರು ಹಾಗೂ ಶಿಕ್ಷಣ ವಂಚಿತರಿಗೆ ಮುಖ್ಯವಾಗಿ ಇಂಗ್ಲಿಷ್ ಕಲಿಸುವ ಉದ್ದೇಶದಿಂದ 1884 ರಲ್ಲಿ ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.

Bal Gangadhar Tilak
Bal Gangadhar Tilak
author img

By

Published : Aug 1, 2020, 12:14 PM IST

"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು" ಎಂದು ಬ್ರಿಟಿಷ್​ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯೂದಿದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಸ್ವರ್ಗವಾಸಿಯಾಗಿ ಇಂದಿಗೆ ನೂರು ವರ್ಷ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತಿ ಪ್ರಮುಖ ಪಾತ್ರ ವಹಿಸಿದ್ದ ಭಾರತಮಾತೆಯ ವೀರ ಸುಪುತ್ರ ತಿಲಕರ ಜೀವನ, ಸಾಧನೆಗಳನ್ನು ಇಂದು ಮತ್ತೊಮ್ಮೆ ಮೆಲುಕು ಹಾಕೋಣ.

ಬಾಲ ಗಂಗಾಧರ ತಿಲಕರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ 1856 ಜುಲೈ 23 ರಂದು ಜನಿಸಿದರು. ಇವರ ನಿಜನಾಮಧೇಯ ಕೇಶವ ಗಂಗಾಧರ ತಿಲಕ್ ಎಂದಾಗಿತ್ತು. ತಂದೆ ಗಂಗಾಧರ ಹಾಗೂ ತಾಯಿ ಪಾರ್ವತಿಬಾಯಿ. ಇವರ ಪತ್ನಿಯ ಹೆಸರು ಸತ್ಯಭಾಮಾಬಾಯಿ. ರಮಾಬಾಯಿ ವೈದ್ಯ, ಪಾರ್ವತಿಬಾಯಿ ಕೇಳ್ಕರ್, ವಿಶ್ವನಾಥ ಬಲವಂತ್ ತಿಲಕ್, ರಾಮಭಾವು ಬಲವಂತ್ ತಿಲಕ್, ಶ್ರೀಧರ ಬಲವಂತ್ ತಿಲಕ್ ಮತ್ತು ರಮಾಬಾಯಿ ಸಾನೆ ಇವರೆಲ್ಲರೂ ತಿಲಕರ ಮಕ್ಕಳು.

ಬಾಲ ಗಂಗಾಧರ ತಿಲಕರ ಆರಂಭಿಕ ಜೀವನ

ಕೇಶವ ಗಂಗಾಧರ ತಿಲಕರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. 1876 ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಗಣಿತ ಹಾಗೂ ಸಂಸ್ಕೃತ ವಿಷಯದಲ್ಲಿ ಅಧ್ಯಯನ ಮಾಡಿ ಪದವಿ ಪಡೆದುಕೊಂಡರು. 1879 ರಲ್ಲಿ ಆಗಿನ ಬಾಂಬೆ ಯುನಿವರ್ಸಿಟಿಯಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಕೆಲಸ ಮಾಡಲಾರಂಭಿಸಿದರು. ಇದೇ ಸಮಯದಲ್ಲಿ ಇವರು ರಾಜಕೀಯದ ಸಂಪರ್ಕಕ್ಕೆ ಬರುವಂತಾಯಿತು.

ಆಗಿನ ಸಮಯದಲ್ಲಿ ಇಂಗ್ಲಿಷ್​ ಕಲಿತವರ ಸಂಖ್ಯೆ ತುಂಬಾ ವಿರಳವಾಗಿತ್ತು. ಆದರೆ ನಾಗರಿಕ ಹಕ್ಕುಗಳ ಪ್ರತಿಪಾದನೆ ಹಾಗೂ ಪ್ರಗತಿಪರ ವಿಚಾರಧಾರೆಯ ಬೆಳವಣಿಗೆಗೆ ಇಂಗ್ಲಿಷ್ ಕಲಿಕೆ ಬಹುದೊಡ್ಡ ಅಸ್ತ್ರ ಎಂದು ತಿಲಕರು ಪ್ರಬಲವಾಗಿ ನಂಬಿದ್ದರು. ಹೀಗಾಗಿ ಸಮಾಜದ ಕೆಳವರ್ಗದವರು ಹಾಗೂ ಶಿಕ್ಷಣ ವಂಚಿತರಿಗೆ ಮುಖ್ಯವಾಗಿ ಇಂಗ್ಲಿಷ್ ಕಲಿಸುವ ಉದ್ದೇಶದಿಂದ 1884 ರಲ್ಲಿ ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.

ಇದರ ಜೊತೆಗೆ ಕೇಸರಿ (ಮರಾಠಿ) ಹಾಗೂ ಮಹರಾಟ್ಟಾ (ಇಂಗ್ಲಿಷ್​) ಎಂಬ ಪತ್ರಿಕೆಗಳನ್ನು ಆರಂಭಿಸಿ ಇವುಗಳ ಮೂಲಕ ಜನರಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ಬಿತ್ತತೊಡಗಿದರು. ಪಾಶ್ಚಿಮಾತ್ಯ ಧೋರಣೆಯ ಸುಧಾರಣಾವಾದಿಗಳನ್ನು ತಮ್ಮ ಲೇಖನಗಳ ಮೂಲಕ ಖಂಡಿಸಿದ ತಿಲಕರು, ಬ್ರಿಟಿಷ್​ ರಾಜ್ ವಿರುದ್ಧ ಪರಿಣಾಮಕಾರಿಯಾಗಿ ಧ್ವನಿ ಎತ್ತಿದರು.

ಏಪ್ರಿಲ್ 1916 ರಲ್ಲಿ ಇಂಡಿಯನ್ ಹೋಂ ರೂಲ್ ಲೀಗ್​ ಚಳವಳಿ ಆರಂಭಿಸಿ, "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೇ ತೀರುವೆ." ಎಂದು ಪ್ರತಿಜ್ಞೆ ಮಾಡಿದರು.

ರಾಜಕೀಯ ಜೀವನದ ಪ್ರಮುಖ ಘಟ್ಟಗಳು

1890 ರಲ್ಲಿ ತಿಲಕರು ಕಾಂಗ್ರೆಸ್​ ಪಕ್ಷ ಸೇರಿದರು. ಬ್ರಿಟಿಷ್​ ಆಡಳಿತದ ಬಗ್ಗೆ ದೇಶದಲ್ಲಿ ಕೆಲವರು ಹೊಂದಿದ್ದ ಮೃದು ಧೋರಣೆಯ ಬಗ್ಗೆ ಇವರಿಗೆ ಭಾರೀ ಕೋಪವಿತ್ತು. ಬ್ರಿಟಿಷ್​ರನ್ನು ಕಂಡರೆ ತಿಲಕರು ಕೆಂಡ ಕಾರುತ್ತಿದ್ದರು. ಬ್ರಿಟಿಷ್​ ರಾಜ್ ಇರುವಾಗ ಪ್ರಥಮ ಬಾರಿಗೆ ಸ್ವರಾಜ್ ಅಥವಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಕೆಲವೇ ಕೆಲ ಹೋರಾಟಗಾರರ ಪೈಕಿ ಬಾಲ ಗಂಗಾಧರ ತಿಲಕರು ಒಬ್ಬರು.

ಸ್ವರಾಜ್ ಅಥವಾ ಸ್ವಾತಂತ್ರ್ಯ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದ ಇವರು, ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆ ಮೊಳಗಿಸಿದರು. ಕಾಂಗ್ರೆಸ್​ ಪಕ್ಷದೊಳಗಿನ ತೀವ್ರಗಾಮಿ ಬಣಧ ನೇತಾರರಾಗಿದ್ದ ತಿಲಕ್, ವಿದೇಶಿ ವಸ್ತುಗಳ ಬಹಿಷ್ಕಾರ ಹಾಗೂ ಸ್ವದೇಶಿ ವಸ್ತುಗಳ ಬಳಕೆಯನ್ನು ಪ್ರತಿಪಾದಿಸಿದರು.

ತಾವೇ ಪ್ರಕಟಿಸುತ್ತಿದ್ದ ಕೇಸರಿ ಹಾಗೂ ಮಹರಟ್ಟಾ ಎಂಬ ಪತ್ರಿಕೆಗಳಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಲೇಖನಗಳ ಸರಮಾಲೆಯನ್ನೇ ಪ್ರಕಟಿಸಿದರು. ಸರ್ಕಾರವನ್ನು ಟೀಕಿಸಲು ಇವರಿಗೆ ಕಿಂಚಿತ್ತೂ ಅಳುಕಿರಲಿಲ್ಲ ಎಂಬುದು ಗಮನಾರ್ಹ.

ಒಂದೊಮ್ಮೆ ತಮ್ಮ ಪತ್ರಿಕೆಯಲ್ಲಿ, "ತಮ್ಮ ಮೇಲೆ ಅನ್ಯಾಯ ಮಾಡುವವರನ್ನು ಕೊಂದರೂ ತಪ್ಪಿಲ್ಲ." ಎಂಬ ಭಗವದ್ಗೀತೆಯನ್ನು ಉಲ್ಲೇಖಿಸಿ ಲೇಖನವೊಂದನ್ನು ಬರೆದಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ದೇಶದಲ್ಲಿ ಪ್ಲೇಗ್​ ಮಹಾಮಾರಿ ಹರಡಿದಾಗ, ಸರ್ಕಾರದ ಹತ್ತಿಕ್ಕುವ ಕ್ರಮಗಳನ್ನು ವಿರೋಧಿಸಿ ಭಾರತೀಯರಿಬ್ಬರು ಇಬ್ಬರು ಬ್ರಿಟಿಷ್​ ಅಧಿಕಾರಿಗಳನ್ನು ಕೊಲೆ ಮಾಡಿ ಬಿಟ್ಟರು. ತಿಲಕರ ಬರಹದ ಪ್ರೇರಣೆಯಿಂದಲೇ ಅಧಿಕಾರಿಗಳ ಕೊಲೆ ನಡೆದಿದೆ ಎಂದು ಆರೋಪಿಸಿದ ಬ್ರಿಟಿಷ್ ಸರ್ಕಾರ, ತಿಲಕ್​ರಿಗೆ 18 ತಿಂಗಳ ಜೈಲುವಾಸದ ಶಿಕ್ಷೆ ನೀಡಿತು.

ಬಾಲ ಗಂಗಾಧರ ತಿಲಕರಷ್ಟೇ ಕ್ರಾಂತಿಕಾರಿಯಾಗಿದ್ದ ಬಿಪಿನ್ ಚಂದ್ರ ಪಾಲ್ ಹಾಗೂ ಲಾಲಾ ಲಜಪತ್​ ರಾಯ್​ ಇವರೂ ಸಹ ತಿಲಕ್​​ರ ಸಮಕಾಲೀನರೇ ಆಗಿದ್ದರು. ಈ ಸಮಯದಲ್ಲಿ ಮೂವರೂ ಕ್ರಾಂತಿಕಾರಿಗಳನ್ನು ಜನ ಲಾಲ್-ಬಾಲ್-ಪಾಲ್ ಎಂದು ಕರೆಯುತ್ತಿದ್ದರು.

ಬ್ರಿಟಿಷ್​ ಸರ್ಕಾರವು ಹಲವಾರು ಬಾರಿ ತಿಲಕ್​ರ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಅವರನ್ನು ವಿಚಾರಣೆಗೊಳಪಡಿಸಿತ್ತು. ಪ್ರಫುಲ್ಲಾ ಚಾಕಿ ಮತ್ತು ಖುದಿರಾಮ್ ಬೋಸ್​ ಅವರನ್ನು ಸಮರ್ಥಿಸಿ ಅಂಕಣಗಳನ್ನು ಬರೆದಿದ್ದಕ್ಕಾಗಿ ತಿಲಕರು 1908 ರಿಂದ 1914 ರವರೆಗೆ ಮಾಂಡಲೆ ಜೈಲಿನಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸಬೇಕಾಯಿತು.

ರೈಲು ಬೋಗಿಯೊಂದಕ್ಕೆ ಬಾಂಬ್​ಗಳನ್ನು ಎಸೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳಾ ಅಧಿಕಾರಿಗಳನ್ನು ಪ್ರಫುಲ್ಲಾ ಚಾಕಿ ಮತ್ತು ಖುದಿರಾಮ್ ಬೋಸ್ ಕೊಂದು ಹಾಕಿದ್ದರು. ಈ ಬೋಗಿಯಲ್ಲಿ ಬ್ರಿಟಿಷ್ ನ್ಯಾಯಾಧೀಶ ಡಗ್ಲಾಸ್ ಕಿಂಗ್ಸ್​ಫರ್ಡ್​ ಪ್ರಯಾಣಿಸುತ್ತಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಚಾಕಿ ಮತ್ತು ಬೋಸ್​ ಅವರಿಗೆ ನೀಡಲಾಗಿತ್ತು.

ಕೆಲ ದಿನಗಳವರೆಗೆ ಕಾಂಗ್ರೆಸ್​ ಪಕ್ಷ ತೊರೆದಿದ್ದ ತಿಲಕ್​ರು 1916 ರಲ್ಲಿ ಮತ್ತೆ ಪಕ್ಷ ಸೇರಿದರು. ಅ್ಯನಿ ಬೆಸೆಂಟ್​ ಹಾಗೂ ಜಿಎಸ್​ ಖಾಪರ್ಡೆ ಅವರೊಂದಿಗೆ ಹೋಂ ರೂಲ್​ ಚಳುವಳಿಯನ್ನು ತಿಲಕ್​ ಆರಂಭಿಸಿದರು. ಸನಾತನ ಭಾರತೀಯ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದ ತಿಲಕರು, ತಮ್ಮ ಹೋರಾಟದಲ್ಲಿ ಇವೇ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು. ಪ್ರಾಚೀನ ಭಾರತೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡೇ ಇವರು ತಮ್ಮ ಚಳವಳಿ ಮುನ್ನಡೆಸಿದರು. ಸರಳವಾಗಿ ಮನೆಯಲ್ಲಿ ಆಚರಿಸಲಾಗುತ್ತಿದ್ದ ಗಣೇಶ ಚತುರ್ಥಿ ಹಬ್ಬಕ್ಕೆ ಸಾರ್ವಜನಿಕ ರೂಪ ಕೊಟ್ಟಿದ್ದು ಹಾಗೂ ಆ ಮೂಲಕ ಬ್ರಿಟಿಷ್​ ಸರ್ಕಾರದ ವಿರುದ್ಧ ಬೃಹತ್​ ಪ್ರಮಾಣದ ಜನಾಂದೋಲನ ಆರಂಭಿಸಿದ್ದು ಬಾಲ ಗಂಗಾಧರ ತಿಲಕರ ಅಪ್ರತಿಮ ಸಾಧನೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.