ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಶ್ರೀ ಬದರಿನಾಥ ಧಾಮದ ಪೋರ್ಟಲ್‌ಗಳು ಮೇ 15 ರಂದು ಪ್ರಾರಂಭವಾಗಲಿದ್ದು, ಸಿದ್ಧತೆಗಳು ಅಂತಿಮ ಹಂತವನ್ನು ತಲುಪಿವೆ.
ದೇವಾಲಯದ ಆವರಣದಿಂದ ಹಿಮವನ್ನು ತೆಗೆಯಲಾಗಿದ್ದು, ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರದ ಬಗ್ಗೆಯೂ ವಿಶೇಷ ಗಮನ ನೀಡಲಾಗುತ್ತಿದ್ದು, ಮುಖಗವಸು ಧರಿಸುವುದು ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಚಾರ್ ಧಾಮ್ ದೇವಸ್ಥಾನ ಮಂಡಳಿ ತಿಳಿಸಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಮುಗಿದ ಕೂಡಲೇ ಚಾರ್ ಧಾಮ್ ಯಾತ್ರೆ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಗರ್ವಾಲ್ ಆಯುಕ್ತ ಮತ್ತು ದೇವಸ್ತಾನ ಮಂಡಳಿಯ ಸಿಇಒ ರಾಮನ್ ರವಿನಾಥ್ ಅವರು ಸಿದ್ಧತೆಗಳಿಗೆ ಆದೇಶ ನೀಡಿದ್ದರು. ಈ ಹಿನ್ನೆಲೆ ಈಗಾಗಲೇ ದೇವಸ್ಥಾನ ಮಂಡಳಿಯ ಸಿಬ್ಬಂದಿ ಬದರಿನಾಥ ತಲುಪಿದ್ದಾರೆ ಎಂದು ಉತ್ತರಾಖಂಡ ಚಾರ್ ಧಾಮ್ ದೇಗುಲ ಮಂಡಳಿಯ ಮಾಧ್ಯಮ ಉಸ್ತುವಾರಿ ತಿಳಿಸಿದ್ದಾರೆ.