ETV Bharat / bharat

ಬಾಬ್ರಿ ಮಸೀದಿ ದ್ವಂಸ ಪ್ರಕರಣ: ಆರೋಪಿಗಳು ವಿಡಿಯೋ ಕಾನ್ಫರೆನ್ಸ್​​ನಲ್ಲಿ​ ಹೇಳಿಕೆ ದಾಖಲಿಸಬಹುದು: ವಿಶೇಷ ಕೋರ್ಟ್​

ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ಇನ್ನುಳಿದ ಆರೋಪಿಗಳ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ದಾಖಲಿಸಲು ಲಖನೌ ವಿಶೇಷ ನ್ಯಾಯಾಲಯವು ಅವಕಾಶ ನೀಡಿದೆ.

Babri accused may record statements through video conference
ಬಾಬ್ರಿ ಮಸೀದಿ ದ್ವಂಸ ಪ್ರಕರಣ ಆರೋಪಿಗಳು ವಿಡಿಯೋ ಕಾನ್ಫರೆನ್ಸ್​​ನಲ್ಲಿ​ ಹೇಳಿಕೆ ದಾಖಲಿಸಬಹುದು: ವಿಶೇಷ ಕೋರ್ಟ್​
author img

By

Published : Jun 11, 2020, 7:04 AM IST

ಲಖನೌ (ಉತ್ತರ ಪ್ರದೇಶ) : ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ಇನ್ನುಳಿದ ಆರೋಪಿಗಳ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ದಾಖಲಿಸಬಹುದು ಎಂದು ವಿಶೇಷ ನ್ಯಾಯಾಲಯ ಸೂಚಿಸಿದೆ.

ಕೋರ್ಟ್​​​​​​ ಸಿಆರ್​​ಪಿಸಿ ಸೆಕ್ಷನ್ 313 ರ ಅಡಿ 32 ಆರೋಪಿಗಳ ಹೇಳಿಕೆಗಳನ್ನು ದಾಖಲಿಸುತ್ತಿದೆ. ಇದು ವಿಚಾರಣೆಯ ಒಂದು ಹಂತವಾಗಿದ್ದು, ಈ ಮೂಲಕ ಸಾಕ್ಷಿಗಳನ್ನು ಪರೀಕ್ಷಿಸಲಾಗುತ್ತಿದೆ. ಅಲ್ಲದೇ ಇನ್ನುಳಿದ ಆರೋಪಿಗಳಲ್ಲಿ ಕೆಲವರು ಈಗಾಗಲೇ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದಾರೆ. ಆದರೆ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಇತರರ ಹೇಳಿಕೆಗಳನ್ನು ಇನ್ನೂ ಪಡೆದಿಲ್ಲ.

ವಿಡಿಯೋ ಕಾನ್ಫರೆನ್ಸ್​‌ ಅವಕಾಶ ಆದೇಶದಿಂದ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಅವರು ಲಖನೌ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ಅಗತ್ಯತೆ ಇಲ್ಲ.

ವಿಚಾರಣೆ ಶುರುವಾದ ಈ ವಾರದ ಆರಂಭದಲ್ಲಿ, ವಿಶೇಷ ನ್ಯಾಯಾಲಯವು ಅಡ್ವಾಣಿ, ಎಂ ಎಂ ಜೋಶಿ ಮತ್ತು ಉಮಾ ಭಾರತಿ ಅವರ ಹೇಳಿಕೆ ನೀಡಲು ಹಾಜರಾಗಲು ಯಾವುದೇ ಸಂದರ್ಭದಲ್ಲೂ ಕೂಡ ಸಿದ್ಧರಾಗಿರುವಂತೆ ಕೋರ್ಟ್​ ತಿಳಿಸಿತ್ತು. ಇದೀಗ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಸಿದ್ಧವಾಗುತ್ತಿರುವುದರಿಂದ ಆರೋಪಿಗಳು ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.