ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಯು ಸಮಾಜವಾದಿ ಪಕ್ಷದ ಸಂಸದ ಮೊಹಮ್ಮದ್ ಅಜಮ್ ಖಾನ್ ಅವರಿಗೆ ಸೇರಿದ್ದ ಭೂ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಅಜಮ್ ಖಾನ್ ಅವರ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ಗೆ ಸೇರಿದ್ದ ಈ ಭೂ ಭಾಗ ಇದೀಗ ವಕ್ಫ್ ಮಂಡಳಿಯ ಪಾಲಾಗಿದೆ.
ಮಂಡಳಿಯ ಅಧ್ಯಕ್ಷರು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಜುನೈದ್ ಖಾನ್ ಎಂಬುವವರನ್ನು ವಕ್ಫ್ನ ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಂದು ನೇಮಿಸಿದ್ದಾರೆ.
ಇದೀಗ ವಕ್ಫ್ ಮಂಡಳಿಗೆ ಸೇರಿರುವ ಐದು ಎಕರೆಗೂ ಹೆಚ್ಚು ಆಸ್ತಿಯನ್ನು ಐದು ವರ್ಷಗಳ ಅವಧಿಯವರೆಗೆ ಹಾಗೂ ಮುಂದಿನ ಸೂಚನೆ ಬರುವವರೆಗೆ ಅವರೇ ನಿರ್ವಹಿಸಲಿದ್ದಾರೆ.