ETV Bharat / bharat

ಪ್ರಿಯಾಂಕಾ ಛೋಪ್ರಾ ಜೈಹಿಂದ್ ಟ್ವೀಟ್​ ವಿವಾದ: ಬೆಂಬಲಕ್ಕೆ ನಿಂತ ಆಯುಷ್ಮಾನ್​ ಖುರಾನಾ - ಆಯುಷ್ಮಾನ್​ ಖುರಾನಾ

ಭಾರತೀಯ ವಾಯುಪಡೆಯು ಬಾಲಕೋಟ್​ನಲ್ಲಿ ದಾಳಿ ನಡೆಸಿದ ಬೆನ್ನಿಗೇ ಟ್ವೀಟ್​ ಮಾಡಿದ್ದ ಪ್ರಿಯಾಂಕಾ ಅವರು, ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದರು.

ಪ್ರಿಯಾಂಕಾ ಛೋಪ್ರಾ ಬೆಂಬಲಿಸಿದ ಆಯುಷ್ಮಾನ್​ ಖುರಾನಾ
author img

By

Published : Aug 22, 2019, 7:56 PM IST

ಮುಂಬೈ: ಪ್ರಿಯಾಂಕಾ ಛೋಪ್ರಾ ಅವರನ್ನು ವಿಶ್ವಸಂಸ್ಥೆಯು ಶಾಂತಿ ರಾಯಭಾರಿಯಾಗಿ ಮುಂದುವರಿಸುವಂತೆ ಬಾಲಿವುಡ್​ ಬಳಗ ಬೆಂಬಲಿಸಿದೆ.

ಆಯುಷ್ಮಾನ್​ ಖುರಾನಾ, ಕಂಗನಾ ರಾಣಾವತ್​ ಸೇರಿದಂತೆ ಬಾಲಿವುಡ್​ ತಾರೆಯರು ಪ್ರಿಯಾಂಕಾ ಛೋಪ್ರಾ ಅವರ ಬೆನ್ನಿಗೆ ನಿಂತಿದೆ.

ಭಾರತೀಯ ವಾಯುಪಡೆಯು ಬಾಲಕೋಟ್​ನಲ್ಲಿ ದಾಳಿ ನಡೆಸಿದ ಬೆನ್ನಿಗೇ ಟ್ವೀಟ್​ ಮಾಡಿದ್ದ ಪ್ರಿಯಾಂಕಾ ಅವರು, ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದರು.

ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಿಯಾಂಕಾರ ಈ ಟ್ವೀಟ್​ಗೆ ಆಕ್ಷೇಪ ವ್ಯಕ್ತಪಡಿಸಿ, ಎರಡು ದೇಶಗಳ ನಡುವೆ ಯುದ್ಧವನ್ನು ಪ್ರೋತ್ಸಾಹಿಸುತ್ತಿರುವ ನೀವು ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಲು ಅನರ್ಹರು ಎಂದು ಟೀಕಿಸಿದ್ದರು.

ಇದನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಸರ್ಕಾರವು ಪ್ರಿಯಾಂಕಾ ಅವರನ್ನು ವಿಶ್ವಸಂಸ್ಥೆ ಶಾಂತಿ ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪತ್ರ ಬರೆದಿದೆ.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪರ ಮಾತನಾಡಿರುವ ಆಯುಷ್ಮಾನ್​ ಖುರಾನಾ ಅವರು ಪ್ರಿಯಾಂಕಾ ಅವರ ತಂದೆ ಸೈನ್ಯದಲ್ಲಿದ್ದ ಕಾರಣ ಬಾಲಕೋಟ್​ ಘಟನೆಯು ಅವರಿಗೆ ಹೆಮ್ಮೆ ಅನಿಸಿದೆ. ಅದರಲ್ಲಿ ಇಲ್ಲದ ತಪ್ಪು ಹುಡುಕುವುದು ಬೇಡ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Intro:Body:

ಪ್ರಿಯಾಂಕಾ ಛೋಪ್ರಾ ಜೈಹಿಂದ್ ಟ್ವೀಟ್​ ವಿವಾದ: ಬೆಂಬಲಕ್ಕೆ ನಿಂತ ಆಯುಷ್ಮಾನ್​ ಖುರಾನಾ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.