ನವದೆಹಲಿ: ಮುಸ್ಲಿಮರಿಗೆ ರಾಮ ಮಂದಿರ ತೀರ್ಪು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಎಲ್ಲಾ ಹಕ್ಕಿದೆ. ಆದರೆ, ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು ಎಂದು ರವಿಶಂಕರ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಅಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ವಿವಾದಕ್ಕೆ ಈಗಾಗಲೇ ತೆರೆ ಎಳೆದಿದೆ. ಈ ಬಗ್ಗೆ ಪ್ರಶ್ನೆ ಮಾಡಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಎಲ್ಲಾ ಹಕ್ಕು ಮುಸ್ಲಿಮರಿಗೆ ಇದೆ. ಆದರೆ, ಈ ಐತಿಹಾಸಿಕ ತೀರ್ಪಿಗೆ ಎರಡೂ ಅರ್ಜಿದಾರರು ಪರಸ್ಪರ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳ ಸತತ ವಿಚಾರಣೆ ಬಳಿಕ ಕೋರ್ಟ್ ಅಂತಿಮ ನಿರ್ಧಾರಕ್ಕೆ ಬಂದು ತೀರ್ಪು ನೀಡಿದೆ. ಮೂಲ ಅರ್ಜಿದಾರರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದರ ಕುರಿತು ಮತ್ತೊಮ್ಮೆ ಯೋಚಿಸಿ ಎಂದು ಅರ್ಜಿದಾರರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರವಿಶಂಕರ್ ಗುರೂಜಿ ಹೇಳಿದರು.