ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಬುಧವಾರದಿಂದ ಪ್ರಾರಂಭವಾಗಲಿದ್ದು, ಅದರ ಅಡಿಪಾಯಕ್ಕಾಗಿ ಮೊದಲ ಕಲ್ಲುಗಳನ್ನು ಅಂದೇ ಹಾಕಲಾಗುವುದು ಎಂದು ದೇವಾಲಯದ ಟ್ರಸ್ಟ್ ಮುಖ್ಯಸ್ಥರ ವಕ್ತಾರರು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ದೇವಾಲಯ ನೀರ್ಮಾಣಕ್ಕೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು.
ಈ ಜಾಗದಲ್ಲಿರುವ ಕುಬರ್ ತಿಲಾ ದೇಗುಲದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಲಂಕಾ ಮೇಲೆ ದಾಳಿ ನಡೆಸುವ ಮೊದಲು ರಾಮ ಶಿವನನ್ನು ಪ್ರಾರ್ಥಿಸುವ ಸಲುವಾಗಿ ಇಲ್ಲಿ ರುದ್ರಾಭಿಷೇಕವನ್ನು ಮಾಡುತ್ತಾನೆ. ಈ ಸಂಪ್ರದಾಯವನ್ನು ಅಂದು ಅನುಸರಿಸಲಾಗುತ್ತದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ವಕ್ತಾರ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ. ಈ ವಿಶೇಷ ಪ್ರಾರ್ಥನೆಯ ನಂತರ ದೇವಾಲಯದ ಅಡಿಪಾಯ ಹಾಕುವ ಕೆಲಸ ಪ್ರಾರಂಭವಾಗುತ್ತದೆ.
ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಮಹಂತ್ ನೃತ್ಯ ಗೋಪಾಲ್ ದಾಸ್ ಪರವಾಗಿ ಕಮಲ್ ನಯನ್ ದಾಸ್ ಮತ್ತು ಇತರ ಪುರೋಹಿತರು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಪೂಜೆ ಪ್ರಾರಂಭವಾಗಲಿದೆ. "ಈ ಧಾರ್ಮಿಕ ಸಮಾರಂಭವು ಕನಿಷ್ಠ ಎರಡು ಗಂಟೆಗಳ ಕಾಲ ನಡೆಯುತ್ತದೆ ಮತ್ತು ನಂತರ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತದೆ ಎಂದು ಕಮಲ್ ನಯನ್ ದಾಸ್ ಹೇಳಿದರು.