ETV Bharat / bharat

ಶಿಲಾನ್ಯಾಸಕ್ಕೂ ಮೊದಲೇ ಕೊರೊನಾ ಸಂಕಟ: ರಾಮ್​ ಲಲ್ಲಾ ಅರ್ಚಕನಿಗೆ ಪಾಸಿಟಿವ್​! - ಉತ್ತರ ಪ್ರದೇಶದಲ್ಲಿ ಕೊರೊನಾ

ರಾಮಮಂದಿರ ನಿರ್ಮಾಣಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಅಲ್ಲಿನ ಅರ್ಚಕರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ram lalla
ರಾಮಲಲ್ಲಾ
author img

By

Published : Jul 30, 2020, 2:11 PM IST

ಅಯೋಧ್ಯಾ(ಉತ್ತರ ಪ್ರದೇಶ): ಅಯೋಧ್ಯಾ ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದ ಮೇಲೆ ಕೊರೊನಾ ಕರಿ ನೆರಳು ಬೀಳಲಾರಂಭಿಸಿದೆ. ರಾಮ ಜನ್ಮಭೂಮಿಯ ಅರ್ಚಕ ಪ್ರದೀಪ್​ ದಾಸ್​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರ ಶಿಷ್ಯರಾಗಿದ್ದಾರೆ. ಇವರ ಜೊತೆಗೆ ರಾಮ ಜನ್ಮಭೂಮಿಯ ಭದ್ರತಾ ಕರ್ತವ್ಯದಲ್ಲಿದ್ದ 16 ಪೊಲೀಸರಿಗೂ ಕೊರೊನಾ ಸೋಂಕು ತಗುಲಿದೆ.

ರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಜೊತೆಗೆ ನಾಲ್ವರು ಅರ್ಚಕರು ರಾಮ್​ ಲಲ್ಲಾ ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಈ ನಾಲ್ವರಲ್ಲಿ ಓರ್ವ ಅರ್ಚಕ ಪ್ರದೀಪ್​ ದಾಸ್​ ಅವರ ಕೊರೊನಾ ರಿಪೋರ್ಟ್​ ಪಾಸಿಟಿವ್ ಬಂದಿದೆ. ಇವರೀಗ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ. 16 ಪೊಲೀಸರೂ ಕ್ವಾರಂಟೈನ್​​ ಆಗಿದ್ದಾರೆ.

ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ಆಗಸ್ಟ್​ 5ರಂದು ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ 200 ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ರಾಮ ಜನ್ಮಭೂಮಿ ಪ್ರದೇಶದಲ್ಲಿ ಗಣ್ಯರಿಗಾಗಿ ಪ್ರತ್ಯೇಕ ಬ್ಲಾಕ್​ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಬ್ಲಾಕ್​​ನಲ್ಲಿ 50 ಮಂದಿ ಕುಳಿತುಕೊಳ್ಳಬಹುದು. ದೇಶದ ಹಲವು ಕಡೆಗಳಿಂದ 50 ಸಾಧು - ಸಂತರು ಆಗಮಿಸಲಿದ್ದಾರೆ. ಇಷ್ಟೇ ಸಂಖ್ಯೆಯಲ್ಲಿ ರಾಜಕೀಯ ನಾಯಕರು ಜೊತೆಗೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡವರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಮಾಜಿ ಉಪ ಪ್ರಧಾನಿ ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್​ ಸಿಂಗ್​ ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.